ಏರ್ ಇಂಡಿಯಾದಿಂದ ಮಂಗಳೂರು- ಮಸ್ಕತ್ ವಿಮಾನ ಯಾನ ಮಾರ್ಚ್ ನಿಂದ ಪುನರಾರಂಭ
Update: 2025-12-13 15:57 IST
ಮಂಗಳೂರು, ಡಿ.13: ಏರ್ ಇಂಡಿಯಾದಿಂದ ಗಲ್ಫ್ ರಾಷ್ಟ್ರವಾದ ಮಸ್ಕತ್ ಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೇರ ವಿಮಾನ ಯಾನ 2026ರ ಮಾರ್ಚ್ ನಿಂದ ಪುನರಾರಂಭಗೊಳ್ಳಲಿದೆ.
ವಾರದಲ್ಲಿ ಎರಡು ವಿಮಾನಗಳು ಹಾರಾಟ ನಡೆಸಲಿದ್ದು, ಮಾರ್ಚ್ ಮೊದಲ ವಾರದಿಂದ ವಿಮಾನಗಳು ಹಾರಾಟ ನಡೆಸಲಿವೆ. ಪ್ರತೀ ಶುಕ್ರವಾರ ಮತ್ತು ರವಿವಾರದಂದು ಐಎಕ್ಸ್ 817 ಮತ್ತು 818 ವಿಮಾನಗಳು ಮಂಗಳೂರು ವಿಮಾನ ನಿಲ್ದಾಣದಿಂದ ಮಸ್ಕತ್ ಗೆ ಹಾರಾಟ ಆರಂಭಿಸಲಿವೆ. ಈ ಹಿಂದೆ ಚಾಲ್ತಿಯಲ್ಲಿದ್ದ ಈ ವಿಮಾನ ಯಾನಗಳ ಸೇವೆಯನ್ನು ಕಾರಣಾಂತರಗಳಿಂದ ಕೆಲ ಸಮಯ ಸ್ಥಗಿತಗೊಳಿಸಲಾಗಿದ್ದು, ಇದೀಗ ಮತ್ತೆ ಪುನರಾರಂಭಕ್ಕೆ ಕ್ರಮ ವಹಿಸಲಾಗಿದೆ ಎಂದು ಏರ್ ಇಂಡಿಯಾ ಪ್ರಕಟನೆ ತಿಳಿಸಿದೆ.