×
Ad

ಅಮ್ಮುಂಜೆ: ರಸ್ತೆ ಬದಿಯ ಚರಂಡಿಗೆ ಬಿದ್ದ ಆಟೋ; ಚಾಲಕ ಮೃತ್ಯು

Update: 2025-02-15 11:19 IST

ಬಂಟ್ವಾಳ : ಚಾಲಕನ ನಿಯಂತ್ರಣ ತಪ್ಪಿದ ಆಟೋ ರಿಕ್ಷಾವೊಂದು ರಸ್ತೆ ಬದಿಯ ಚರಂಡಿಗೆ ಬಿದ್ದು ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮೂವರು ಮಕ್ಕಳಿಗೆ ಗಾಯವಾಗಿರುವ ಘಟನೆ ಅಮ್ಮುಂಜೆಯಲ್ಲಿ ಶುಕ್ರವಾರ ಮಧ್ಯ ರಾತ್ರಿ ವೇಳೆ ನಡೆದಿದೆ.

ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಗಾಣೆಮಾರ್ ಎಂಬಲ್ಲಿ ಅಪಘಾತ ನಡೆದಿದ್ದು, ರಿಕ್ಷಾ ಚಾಲಕ ಅಮ್ಮುಂಜೆ ನಿವಾಸಿ ಮಹಾಬಲ ಪೂಜಾರಿ ( 37) ಮೃತಪಟ್ಟ ಅವಿವಾಹಿತ ಯುವಕ. ಈತನ ಸಂಬಂಧಿಗಳಾದ ತುಷಾರ್,ಭವಿತ್ ಮತ್ತು ಪ್ರದೀಪ್ ಎಂಬವರು ಗಾಯಗೊಂಡ ಮಕ್ಕಳು.

ಮೂಡಬಿದಿರೆಯ ಮಿಜಾರು ಎಂಬಲ್ಲಿಗೆ ಜಾತ್ರೆಗೆ ಹೋಗಿ ಮರಳುವ ವೇಳೆ ಮನೆಗೆ ಸುಮಾರು 500 ಮೀ ದೂರದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಚಾಲಕನ ನಿಯಂತ್ರಣ ‌ಕಳೆದುಕೊಂಡ ರಿಕ್ಷಾ ತಲೆಕೆಳಗಾದ ಸ್ಥಿತಿಯಲ್ಲಿ ಚರಂಡಿಗೆ ಬಿದ್ದಿದೆ. ಮೂವರು ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಬಂಟ್ವಾಳ ಸಂಚಾರಿ ಪೋಲಿಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News