×
Ad

ಕರಾಟೆಯಲ್ಲಿ ಪ್ರಥಮ ಸ್ಥಾನ ಪಡೆದ ಅಮೈರಾ

Update: 2023-09-28 20:12 IST

ಕುಂದಾಪುರ, ಸೆ.28: ಮಣಿಪಾಲದಲ್ಲಿ ಇತ್ತೀಚೆಗೆ ಆಯೋಜಿಸಲಾದ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್‌ಷಿಪ್‌ನ ಬಾಲಕಿಯರ ವಿಭಾಗಲ್ಲಿ ನಡೆದ ಕುಮಿಟೆ ಮತ್ತು ಕಟಾ ಎರಡೂ ಸ್ಪರ್ಧೆಗಳಲ್ಲಿ ಕುಂದಾಪುರದ ಓಕ್‌ವುಡ್ ಇಂಡಿಯನ್ ಸ್ಕೂಲ್‌ನ 3ನೇ ತರಗತಿ ವಿದ್ಯಾರ್ಥಿನಿ ಅಮೈರಾ ಶೋಲಾಪುರ್ ಪ್ರಥಮ ಸ್ಥಾನ ಗೆದ್ದುಕೊಂಡಿದ್ದಾಳೆ.

ಈಕೆ ಹೆಮ್ಮಾಡಿ ಸಂತೋಷ್ ನಗರದ ನಿವಾಸಿ ರಝಿಯಾ ಸುಲ್ತಾನ ಮತ್ತು ಯಾಸೀನ್ ಫೈರೋಝ್ ದಂಪತಿಗಳ ಪುತ್ರಿ. ಕುಂದಾಪುರದ ಕರಾಟೆ ಶಿಕ್ಷಕ ರಾದ ಕಿಯೊಶಿ ಕಿರಣ್, ಶಿಹಾನ್ ಸಂದೀಪ್, ಸಿಹಾನ್ ಶೇಕ್ ಹಾಗೂ ನಟರಾಜ್ ಅವರಲ್ಲಿ ತರಬೇತು ಪಡೆದಿದ್ದಾಳೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News