×
Ad

ಪನೀರ್ ಸಂತ ವಿಶೆಂತ್ ಪಾವ್ಲ್ ಸಭಾದ ವಾರ್ಷಿಕೋತ್ಸವ

Update: 2023-09-24 18:26 IST

ಮಂಗಳೂರು, ಸೆ.24: ನೊಂದವರ ಕಣ್ಣೀರು ಒರೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸಂಘಟನೆಗಳು ಧಾರ್ಮಿಕ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೆ ಆರ್ಥಿಕವಾಗಿ ಹಿಂದುಳಿದವರ ಸೇವೆ ಮಾಡುವ ಗುಣ ಬೆಳೆಸಿಕೊಳ್ಳಬೇಕು. ಈ ವಿಷಯದಲ್ಲಿ ಜಾತಿ, ಧರ್ಮ ನೋಡುವ ಅಗತ್ಯವಿಲ್ಲ, ಇಂತಹ ಸೇವೆಯು ಗುಪ್ತವಾಗಿ ನಡೆಯಬೇಕು ಎಂದು ಪನೀರ್ ಚರ್ಚ್‌ನ ಧರ್ಮಗುರು ಫಾ.ವಿಕ್ಟರ್ ಡಿ ಮೆಲ್ಲೋ ಅಭಿಪ್ರಾಯಪಟ್ಟರು.

ಪನೀರ್ ಸಂತ ವಿಶೆಂತ್ ಪಾವ್ಲ್ ಸಭಾ ವತಿಯಿಂದ 25ನೇ ವಾರ್ಷಿಕೋತ್ಸವ ಪ್ರಯುಕ್ತ ಪನೀರ್ ಮೆರ್ಸಿಯಮ್ಮನವರ ಇಗರ್ಜಿಯ ಆಶ್ರಯದಲ್ಲಿ ಚರ್ಚ್ ಸಭಾಂಗಣದಲ್ಲಿ ರವಿವಾರ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಸ್ಥೆಯು ಹಿಂದೆಯೂ ಬಡ ಕುಟುಂಬಗಳಿಗೆ ಮನೆ ನಿರ್ಮಿಸಿ ಕೊಟ್ಟಿದೆ. ಪ್ರಸ್ತುತ ಹಮ್ಮಿಕೊಂಡಿರುವ ಮನೆ ದುರಸ್ತಿ ಸೇವೆಗೆ ಸರ್ವರೂ ತಮ್ಮಿಂದಾದ ನೆರವು ನೀಡುವ ಮೂಲಕ ಪ್ರೋತ್ಸಾಹ ನೀಡಬೇಕು. ಕಷ್ಟ ಹೇಳಿಕೊಂಡು ಬಂದವರಿಗೆ ತಮ್ಮಿಂದಾದ ನೆರವು ನೀಡಬೇಲು ಎಂದು ಫಾ.ವಿಕ್ಟರ್ ಡಿ ಮೆಲ್ಲೋ ನುಡಿದರು.

ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷೆ ಸರಿಟಾ ಡಿಸೋಜ ಮಾತನಾಡಿ ಚರ್ಚ್ ವ್ಯಾಪ್ತಿಯ ಮನೆಗಳನ್ನು ಸರ್ವೇ ಮಾಡಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳನ್ನು ಗುರುತಿಸಿ ಸಹಾಯ ಹಸ್ತ ಚಾಚುತ್ತಾ ಬಂದಿದೆ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರಿಗೆ ದಿನಬಳಕೆಯ ವಸ್ತುಗಳನ್ನು ವಿತರಿಸಲಾಯಿತು. ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮನೆ ದುರಸ್ತಿಗೆ ಚಾಲನೆ ನೀಡಲಾಯಿತು. ಕಾರ್ಯದರ್ಶಿ ಗ್ರೆಟ್ಟಾ ಡಿಕುನ್ನ, 21ನೆ ಅಯೋಗದ ಸಂಯೋಜಕ ರೋನಾಲ್ದ್ ಡಿಸೋಜ, ಸಂತ ವಿಶೆಂತ್ ಪಾವ್ಲ್ ಸಭಾ ವಾರ್ಡ್ ಅಧ್ಯಕ್ಷ ಫ್ರಾಂಕಿ ಫೆರಾವೊ, ಗಿಲ್ಬರ್ಟ್ ಡಿಸೋಜ ಉಪಸ್ಥಿತರಿದ್ದರು.

ಸಂತ ವಿಶೆಂತ್ ಪಾವ್ಲ್ ಸಭಾ ಅಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹ ಸ್ವಾಗತಿಸಿದರು. ಕಾರ್ಯದರ್ಶಿ ಫ್ಯಾಟ್ರಿಕ್ ಡಿಸೋಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವ ಘಟಕದ ಅಧ್ಯಕ್ಷ ದೀಪಕ್ ರೋಡ್ರಿಗಸ್ ವಂದಿಸಿದರು. ವಿನ್ನಿ ಕುಟಿನ್ಹಾ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News