ಪಿ.ಎ. ಕಾಲೇಜ್ ಆಫ್ ಫಾರ್ಮಸಿಯಲ್ಲಿ ವಾರ್ಷಿಕ ಕ್ರೀಡೋತ್ಸವ
ದೇರಳಕಟ್ಟೆ :ನಡುಪದವಿನ ಪಿ.ಎ. ಕಾಲೇಜ್ ಆಫ್ ಫಾರ್ಮಸಿಯ ವಾರ್ಷಿಕ ಕ್ರೀಡಾ ಉತ್ಸವ "ಝೆನಿಥಾನ್ 25" ಪೇಸ್ ಮೈದಾನದಲ್ಲಿ ನಡೆಯಿತು.
ಕ್ರೀಡೋತ್ಸವವನ್ನು ಉದ್ಘಾಟಿಸಿದ ಕೊಣಾಜೆ ಪೊಲೀಸ್ ಉಪನಿರೀಕ್ಷಕನಾಗರಾಜ್ "ಕ್ರೀಡೆಯು ದೇಹ, ಮನಸ್ಸು ಮತ್ತು ಸಮಾಜದ ಆರೋಗ್ಯವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ಆದ್ದರಿಂದ ಕ್ರೀಡೆಯನ್ನು ನಮ್ಮ ದಿನಚರಿಯಲ್ಲಿ ಸೇರಿಸಿ ಆರೋಗ್ಯಕರ ಮತ್ತು ಸಂತೋಷಕರ ಜೀವನವನ್ನು ನಡೆಸಬಹುದೆಂದು ಹೇಳಿದರು. ಪಿ.ಎ. ಫಿಸಿಯೋಥೆರಪಿ ಪ್ರಾಂಶುಪಾಲ ಡಾ. ಸಜೀಶ್ ರಘುನಾಥನ್ ಮಾತನಾಡಿ "ಕ್ರೀಡೆಗಳು ರಕ್ತಪರಿಚಲನೆ ಸುಧಾರಿಸಿ, ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಸ್ನಾಯು ಮತ್ತು ಮೂಳೆಗಳ ಬಲವನ್ನು ಹೆಚ್ಚಿಸುತ್ತದೆ ಎಂದರು.
ಪಿ.ಎ. ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ. ಸಲೀಮುಲ್ಲಾ ಖಾನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪಿ.ಎ. ಎಜ್ಯುಕೇಶನಲ್ ಟ್ರಸ್ಟ್ ಅಸಿಸ್ಟಂಟ್ ಜನರಲ್ ಮ್ಯಾನೇಜರ್ ಶರಫುದ್ಧೀನ್ ಪಿ.ಕೆ., ಸೆಂಟರ್ ಫಾರ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಆಂಡ್ ರಿಸರ್ಚ್ ನಿರ್ದೇಶಕ ಡಾ. ಸಯ್ಯದ್ ಅಮೀನ್, ಕ್ಯಾಂಪಸ್ ಸೆಕ್ರೆಟರಿ ರುದ್ರೇಶ್, ಪಿ.ಎ. ಫಾರ್ಮಸಿ ಕಾಲೇಜಿನ ಉಪಪ್ರಾಂಶುಪಾಲ ಡಾ. ಮುಹಮ್ಮದ್ ಮುಬೀನ್ ಮತ್ತು ಕ್ರೀಡಾ ಸಂಯೋಜಕ ಡಾ. ಮನೋಹರ್ ನಾಯಕ್ ಉಪಸ್ಥಿತರಿದ್ದರು.
ದೈಹಿಕ ನಿರ್ದೇಶಕ ಡಾ. ಇಕ್ಬಾಲ್, ಸುಂದರ್ ಮತ್ತು ಮೋಕ್ಷಾ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಿದ್ದರು. ಕ್ರೀಡಾ ಕಾರ್ಯದರ್ಶಿ ನಿಝಾಮುದ್ಧೀನ್ ಪ್ರತಿಜ್ಞಾವಿಧಿ ಬೋಧಿಸಿದರು. ಅನ್ಸಾದ್ ಪ್ರಾರ್ಥನೆ ನೆರವೇರಿಸಿದರು. ಶ್ರಾವ್ಯ ಸ್ವಾಗತಿಸಿದರು. ನಹೀದಾ ಬೇಗಮ್ ವಂದಿಸಿದರು. ನಜ್ಫತ್ ಕಾರ್ಯಕ್ರಮ ನಿರೂಪಿಸಿದರು