×
Ad

ಮಂಗಳೂರು ಪೊಲೀಸ್ ಕಮಿಷನರ್ ಹೆಸರಿನಲ್ಲಿ ಮತ್ತೊಂದು ನಕಲಿ ಫೇಸ್‌ಬುಕ್ ಖಾತೆ; ಪ್ರಕರಣ ದಾಖಲು

Update: 2025-11-27 19:29 IST

ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ

ಮಂಗಳೂರು: ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿಯ ಹೆಸರಿನಲ್ಲಿ ಮತ್ತೊಂದು ನಕಲಿ ಫೇಸ್‌ಬುಕ್ ಖಾತೆ ತೆರೆದಿರುವುದು ಬೆಳಿಕೆ ಬಂದಿದೆ. ಈ ಕಂಕನಾಡಿ ನಗರದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಠಾಣೆಯ ಎಸ್ಸೈ ಶಿವಕುಮಾರ್ ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳನ್ನು ಪರಿಶೀಲಿಸುತ್ತಿರುವ ವೇಳೆ ಫೇಸ್‌ಬುಕ್‌ನಲ್ಲಿ Mangaluru CityPolice ಎಂಬ ಹೆಸರಿನ ಫೇಸ್‌ಬುಕ್ ಖಾತೆ ಕಂಡು ಬಂದಿದೆ. ಅದರ ಪ್ರೊಫೈಲನ್ನು ಪರಿಶೀಲಿಸಿದಾಗ ಪೊಲೀಸ್ ಆಯುಕ್ತರ ಫೊಟೊ, ರಾಜ್ಯ ಸರಕಾರದ ಲೋಗೋ ಇತ್ತು. ಸಿಟಿ ಮತ್ತು ಪೊಲೀಸ್ ಮಧ್ಯೆ ಅಂತರ ಇಲ್ಲದಿದ್ದುದರಿಂದ ಈ ಖಾತೆಯ ಬಗ್ಗೆ ಸಂಶಯಗೊಂಡು ಪೊಲೀಸ್ ಆಯುಕ್ತರ ಕಚೇರಿಯ ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್‌ಗೆ ಮಾಹಿತಿ ಕಳುಹಿಸಿಕೊಟ್ಟು ವಿಚಾರಿಸಿದಾಗ https://www.facebook.co,/profile.php?id =100089579642315 ನಕಲಿ ಖಾತೆ ಎಂಬುದು ದೃಢಪಟ್ಟ ಬಳಿಕ ಪ್ರಕರಣ ದಾಖಲಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News