×
Ad

ಮಂಗಳೂರು | ಸಮಸ್ತ ಮದ್ರಸಗಳಲ್ಲಿ ನಾಳೆ ಮಾದಕ ದ್ರವ್ಯ ವಿರೋಧಿ ಅಭಿಯಾನ

Update: 2025-05-17 20:16 IST

ಮಂಗಳೂರು : ಸಮಸ್ತ ವಿದ್ಯಾಭ್ಯಾಸ ಬೋರ್ಡ್ ನಿರ್ದೇಶನದಂತೆ SKIMV BOARD ಅಧೀನದಲ್ಲಿ ಕಾರ್ಯಾಚರಿಸುವ ಸುಮಾರು ಹನ್ನೊಂದು ಸಾವಿರ ಮದ್ರಸಗಳಲ್ಲಿ ಏಕಕಾಲದಲ್ಲಿ ಮಾದಕ ದ್ರವ್ಯ ವಿರೋಧಿ ಅಭಿಯಾನ ನಡೆಯಲಿದೆ.

ಕಾರ್ಯಕ್ರಮದ ಅಂಗವಾಗಿ ಮೇ 18ರ ಆದಿತ್ಯವಾರ ಬೆಳಿಗ್ಗೆ 7:30ಕ್ಕೆ ವಿಶೇಷ ಅಸೆಂಬ್ಲಿ ನಡೆಸಿ, ಪ್ರತಿಜ್ಞಾ ವಿಧಿ ಬೋಧನೆ ಹಾಗೂ ಮಾದಕ ವ್ಯಸನದ ಕುರಿತು ಜಾಗೃತಿ ಸಂದೇಶಗಳು ನಡೆಯಲಿದೆ.

ನಂತರ ಸುಮಾರು 10 ಲಕ್ಷ ಸಹಿ ಸಂಗ್ರಹ ನಡೆಸಿ ಮಾನ್ಯ ಮುಖ್ಯಮಂತ್ರಿ ಗಳಿಗೆ ಸಲ್ಲಿಸಲಾಗುವುದು. ಮುಂದಿನ ದಿನಗಳಲ್ಲಿ ಪ್ರತಿ ಮೊಹಲ್ಲಾ/ ಮದ್ರಸ ಕೇಂದ್ರೀಕರಿಸಿ ಮನೆ ಮನೆ ಭೇಟಿ , ಜಾಗೃತಿ ತರಗತಿಗಳು, ಡಾಕ್ಯುಮೆಂಟರಿ ಪ್ರದರ್ಶನ, ಮುಂತಾದವು ನಡೆಯಲಿದೆ.

ದ.ಕ.ಜಿಲ್ಲೆಯ ಸಮಸ್ತ ಅಧೀನದ 530 ಮದ್ರಸಗಳಲ್ಲಿ ವಿಶೇಷ ಅಸೆಂಬ್ಲಿ ನಡೆಯಲಿದ್ದು, ಸಹಿ ಸಂಗ್ರಹಿಸಿ ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಲಾಗುವುದು ಎಂದು ದ.ಕ.ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ಶಂಸುದ್ದೀನ್ ದಾರಿಮಿ ಹಾಗೂ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ನವವಿ ಮುಂಡೋಳೆ ಮತ್ತು ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News