×
Ad

ಶಿವಳ್ಳಿ ಸಮುದಾಯಕ್ಕೆ ಅ್ಯಪ್ ರಚನೆ: ಕೃಷ್ಣ ಭಟ್

Update: 2023-07-29 19:35 IST

ಮಂಗಳೂರು, ಜು.29: ಶಿವಳ್ಳಿ ಬ್ರಾಹ್ಮಣರ ಅಭಿವೃದ್ಧಿಗಾಗಿ ಪ್ರತ್ಯೇಕ ಅ್ಯಪ್ ರಚಿಸಲಾಗುವುದು ಎಂದು ಶಿವಳ್ಳಿ ಸ್ಪಂದನ ಅಧ್ಯಕ್ಷ ಕದ್ರಿ ಕೃಷ್ಣ ಭಟ್ ಹೇಳಿದರು.

ಶಿವಳ್ಳಿ ಸ್ಪಂದನ ಕದ್ರಿ ವಲಯದ ಮಹಾಸಭೆ ಮತ್ತು ಆಟಿದ ಕೂಟದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಅ್ಯಪ್‌ಗಳಲ್ಲಿ ವೃತ್ತಿ, ಸಂಪರ್ಕ ವಿವರ ಇರಲಿದೆ. ಅಗತ್ಯ ಬಿದ್ದಾಗ ತಜ್ಞರ ನೆರವು ಪಡೆಯಲು ಸುಲಭವಾಗಲಿದೆ. ಉಳಿದ ಸಮುದಾಯದವರಂತೆ ಬ್ರಾಹ್ಮಣರೂ ಸಂಘಟಿತರಾಗಬೇಕು. ಶಿವಳ್ಳಿ ಸಮುದಾಯ ಭವನ ನಿರ್ಮಿಸಬೇಕು ಎಂದರು.

ವಲಯಾಧ್ಯಕ್ಷ ರಾಮಚಂದ್ರ ಭಟ್ ಎಲ್ಲೂರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯದರ್ಶಿ ಗಣೇಶ್ ಹೆಬ್ಬಾರ್, ವಲಯ ಕಾರ್ಯದರ್ಶಿ ಗೀತಾ ಬೆಳ್ಳೆ, ಮಹಿಳಾ ಘಟಕಾಧ್ಯಕ್ಷೆ ರಮಾಮಣಿ ಭಟ್, ಕೋಶಾಧಿಕಾರಿ ಸುಮನಾ ರಾವ್ ಉಪಸ್ಥಿತರಿದ್ದರು.

ಸುಧಾಕರ ಭಟ್ ಆರೂರು ಲೆಕ್ಕಪತ್ರ ಮಂಡಿಸಿದರು. ದುರ್ಗಾ ರಾಮದಾಸ್ ಕಟೀಲ್ ಕಾರ್ಯಕ್ರಮ ನಿರೂಪಿಸಿದರು. ವಲಯ ಉಪಾಧ್ಯಕ್ಷೆ ಅನುಪಮ ಅಡಿಗ ವಂದಿಸಿದರು. ಈ ಸಂದರ್ಭ ಫಿಸಿಯಾಲೊಜಿ ವಿಭಾಗದಲ್ಲಿ ರ್ಯಾಂಕ್ ಗಳಿಸಿದ ಡಾ. ಮೈತ್ರಿ ಅವರನ್ನು ಸನ್ಮಾನಿಸಲಾಯಿತು. ಕ್ರೀಡಾ ಸಾಧಕರಾದ ಋತ್ವಿಕ್ ಅಲೆವೂರಾಯ ಮತ್ತು ಸಂಹಿತಾ ಅಲೆವೂರಾಯ ಅವರನ್ನು ಗೌರವಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News