ಕಾಣೆಯಾದ ವ್ಯಕ್ತಿಯ ಪತ್ತೆಗೆ ಮನವಿ
Update: 2025-11-10 18:58 IST
ಮಂಗಳೂರು : ನಗರದ ಬಿಕರ್ನಕಟ್ಟೆಯ ಪದವು ಎಂಬಲ್ಲಿ ವಾಸವಾಗಿದ್ದ ಉಮೇಶ್ ನಾಯ್ಕ್ (53) ಎಂಬವರು 2022ರ ಜ.21ರಂದು ಕಾಣೆಯಾಗಿದ್ದಾರೆ.
5-6 ತಿಂಗಳಿನಿಂದ ಕೆಲಸವಿಲ್ಲದೆ ಮನೆಯಲ್ಲಿದ್ದ ಉಮೇಶ್ ನಾಯ್ಕ್ ಮನೆಯಿಂದ ಹೊರಗಡೆ ಹೋದವರು ಮರಳಿ ಬಂದಿಲ್ಲ ಎಂದು ಕಂಕನಾಡಿ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
5.8 ಅಡಿ ಎತ್ತರದ, ಎಣ್ಣೆ ಕಪ್ಪುಮೈಬಣ್ಣದ, ಸಾಧಾರಣ ಶರೀರದ, ಕೋಲು ಮುಖದ ಇವರು ಕಾಣೆಯಾದ ದಿನ ಕಂದು ಬಣ್ಣದ ಅಂಗಿ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದರು. ಕನ್ನಡ, ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.