×
Ad

ಮೇಲ್ವಿಚಾರಕ ಹುದ್ದೆಗಳಿಗೆ ಅರ್ಜಿ ಆಹ್ವಾನ

Update: 2023-10-17 21:56 IST

ಮಂಗಳೂರು : ದ.ಕ. ಜಿಲ್ಲಾ ವ್ಯಾಪ್ತಿಯ 17 ಗ್ರಾಪಂಗಳಲ್ಲಿ ಖಾಲಿ ಇರುವ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ನ.6ರೊಳಗೆ ಅರ್ಜಿ ಆಹ್ವಾನಿಸಲಾಗಿದೆ.

ಮುಲ್ಕಿ ತಾಲೂಕಿನ ಅತಿಕಾರಿಬೆಟ್ಟು ಗ್ರಾಪಂ, ಮೂಡುಬಿದಿರೆ ತಾಲೂಕಿನ ಇರುವೈಲ್, ವಾಲ್ಪಾಡಿ ಗ್ರಾಪಂ, ಬಂಟ್ವಾಳ ತಾಲೂಕಿನ ಇರ್ವತ್ತೂರು, ಮಣಿ ನಾಲ್ಕೂರು, ಮಾಣಿಲಾ, ಮಾಣಿ, ಸಾಲೆತ್ತೂರು ಗ್ರಾಪಂ, ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಪಂ, ಕಡಬ ತಾಲೂಕಿನ ಕಡ್ಯಾ ಕೊಣಾಜೆ ಗ್ರಾಪಂ, ಪುತ್ತೂರು ತಾಲೂಕಿನ ಕೆಯ್ಯೂರು ಹಾಗೂ ನಿಡ್ಪಳ್ಳಿ ಗ್ರಾಪಂ, ಸುಳ್ಯ ತಾಲೂಕಿನ ಪೆರುವಾಜೆ ಗ್ರಾಪಂ, ಮಂಗಳೂರು ತಾಲೂಕಿನ ಬಡಗ ಎಡಪದವು ಹಾಗೂ ಮಲ್ಲೂರು ಗ್ರಾಪಂ, ಉಳ್ಳಾಲ ತಾಲೂಕಿನ ಸಜಿಪಪಡು ಗ್ರಾಪಂ ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ಗ್ರಾಪಂಗಳಲ್ಲಿ ಹುದ್ದೆ ಖಾಲಿ ಇದೆ ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News