×
Ad

ಎಸ್‌ವೈಎಸ್ ದ.ಕ ಈಸ್ಟ್ ಸಮಿತಿಗೆ ನೂತನ ಅಧ್ಯಕ್ಷರಾಗಿ ಅಶ್ರಫ್ ಸಖಾಫಿ ಮೂಡಡ್ಕ ಆಯ್ಕೆ

Update: 2025-05-14 12:11 IST

ಅಶ್ರಫ್ ಸಖಾಫಿ ಮೂಡಡ್ಕ

ಮಂಗಳೂರು : ಸುನ್ನೀ ಯುವಜನ ಸಂಘ ಕರ್ನಾಟಕ (ಎಸ್ ವೈ ಎಸ್ ) ದ.ಕ ಈಸ್ಟ್ ಜಿಲ್ಲೆಯ 2025-26 ವರ್ಷದ ನೂತನ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ಅಧ್ಯಕ್ಷರಾಗಿ ಅಶ್ರಫ್ ಸಖಾಫಿ ಮೂಡಡ್ಕ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸ್ವಾಲಿಹ್ ಮುರ, ಮತ್ತು ಕೋಶಾಧಿಕಾರಿಯಾಗಿ ಶಾಫಿ ಸಖಾಫಿ ಕೊಕ್ಕಡ ಇವರನ್ನು ಆರಿಸಲಾಯಿತು.

ಉಪಾಧ್ಯಕ್ಷರಾಗಿ ಸಂಘಟನಾ ವಿಭಾಗಕ್ಕೆ ಹಂಝ ಮದನಿ ಗುರುವಾಯನಕೆರೆ, ದುವಾ ಮತ್ತು ಟ್ರೈನಿಂಗ್ ವಿಭಾಗಕ್ಕೆ ಸಿರಾಜುದ್ದೀನ್ ಸಖಾಫಿ, ಮೀಡಿಯಾ ಹಾಗೂ ಐಟಿ ವಿಭಾಗಕ್ಕೆ ಅಬೂಶಝ ಅಬ್ದುರ್ರಝಾಕ್ ಖಾಸಿಮಿ ಕೂರ್ನಡ್ಕ, ಸಾಂತ್ವನ ಮತ್ತು ಇಸಾಬಾ ವಿಭಾಗಕ್ಕೆ ಉಸ್ಮಾನ್ ಸೋಕಿಲ, ಸೋಷಿಯಲ್ ಮತ್ತು ಕಲ್ಚರಲ್ ವಿಭಾಗಕ್ಕೆ ಅಝೀಝ್ ಚೆನ್ನಾರ್ ಇವರನ್ನು ಆಯ್ಕೆ ಮಾಡಲಾಯಿತು.

ಸಂಘಟನೆ ವಿಭಾಗಕ್ಕೆ ಕಾರ್ಯದರ್ಶಿಯಾಗಿ ಖಲಂದರ್ ಪದ್ಮುಂಜ, ದುವಾ ಮತ್ತು ಟ್ರೈನಿಂಗ್ ವಿಭಾಗಕ್ಕೆ ಸಿದ್ದೀಕ್ ಮಿಸ್ಬಾಹಿ ,ಸಾಂತ್ವನ ಮತ್ತು ಇಸಾಬ ವಿಭಾಗಕ್ಕೆ ಸಲೀಮ್ ಕನ್ಯಾಡಿ ,ಮೀಡಿಯ ಮತ್ತು ಐಟಿ ವಿಭಾಗಕ್ಕೆ ಹಸೈನಾರ್ ಗುತ್ತಿಗಾರ್, ಸೋಷಿಯಲ್ ಮತ್ತು ಕಲ್ಚರಲ್ ವಿಭಾಗಕ್ಕೆ ಅಬ್ದುರ್ರಹ್ಮಾನ್ ಶರಫಿ ಇವರನ್ನು ಆರಿಸಲಾಯಿತು.

ಸದಸ್ಯರಾಗಿ ಮುಸ್ತಫಾ ಕೋಡಪದವು, ಅಬ್ದುಲ್ ಹಮೀದ್ ಕೊಯಿಲ, ಕಾಸಿಂ ಮುಸ್ಲಿಯಾರ್, ರಫೀಕ್ ಬಜಾರ್, ಎ.ಬಿ.ಅಶ್ರಫ್ ಸ‌ಅದಿ,ಯೂಸುಫ್ ಸಖಾಫಿ ಬೆಳಂದೂರು, ಹೈದರ್ ಸಖಾಫಿ ಬುಡೋಳಿ, ಅಬ್ದುರ್ರಝಾಕ್ ಲತೀಫಿ, ಅಬ್ದುಲ್ ಜಲೀಲ್ ಸಖಾಫಿ, ಅಬ್ದುಲ್ಲತೀಫ್ ಜೌಹರಿ, ಹಂಝ ಕೆ.ಎ.ಜಮಾಲುದ್ದೀನ್ ಲತೀಫಿ ಸಿದ್ದೀಕ್ ಗೂನಡ್ಕ, ನಝೀರ್ ರವರನ್ನು ಆಯ್ಕೆ ಮಾಡಲಾಯಿತು.

ನಿಕಟಪೂರ್ವ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಮಿಸ್ಬಾಹಿರವರ ಅಧ್ಯಕ್ಷತೆಯಲ್ಲಿ ನಡೆದ ಎಸ್ ವೈ ಎಸ್ ಈಸ್ಟ್ ಜಿಲ್ಲಾ ಮಹಾಸಭೆಯಲ್ಲಿ ರಾಜ್ಯ ನಾಯಕರಾದ ಜಿ.ಎಂ ಕಾಮಿಲ್ ಸಖಾಫಿ, ಕೆ.ಎಂ.ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ, ಮನ್ಸೂರ್ ಕೋಟಗದ್ದೆ, ಎಂ ಬಿ ಎಂ ಸ್ವಾದಿಕ್ ಮಾಸ್ಟರ್, ಇಸ್ಮಾಯಿಲ್ ಮಾಸ್ಟರ್, ಯೂಸುಫ್ ಸ‌ಈದ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News