ಏಷ್ಯನ್ ಅರಬಿಕ್ ಡಿಬೇಟ್: ದಾರುಲ್ ಹುದಾ ಇಸ್ಲಾಮಿಕ್ ವಿವಿ ಚಾಂಪಿಯನ್
ಮಸ್ಕತ್(ಒಮಾನ್): ಖತರ್ ಡಿಬೇಟ್‌ನ ಅಧೀನ ಮತ್ತು ಒಮಾನ್ ಸಂಸ್ಕೃತಿ, ಕ್ರೀಡೆ ಹಾಗೂ ಯುವ ಸಚಿವಾಲಯದ ಸಹಯೋಗದೊಂದಿಗೆ ಅ.28ರಿಂದ ನ.1ರವರೆಗೆ ಒಮಾನಿನ ಮಸ್ಕತ್‌ನಲ್ಲಿ ನಡೆದ ಏಷ್ಯನ್ ಅರಬಿಕ್ ಮೂರನೇ ಡಿಬೇಟ್‌ನಲ್ಲಿ ಭಾರತದ ಪ್ರತಿನಿಧಿಗಳಾಗಿ ಭಾಗವಹಿಸಿದ್ದ ಮಲಪ್ಪುರಂ ಜಿಲ್ಲೆಯ ಚೆಮ್ಮಾಡ್‌ನ ದಾರುಲ್ ಹುದಾ ಇಸ್ಲಾಮಿಕ್ ವಿಶ್ವವಿದ್ಯಾನಿಲಯ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಏಷ್ಯಾದ 18 ರಾಷ್ಟ್ರಗಳಿಂದ ಸುಮಾರು 40 ಶೈಕ್ಷಣಿಕ ಸಂಸ್ಥೆಗಳು ಮತ್ತು 145ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ದಾರುಲ್ ಹುದಾ ತಂಡವು ವಿವಿಧ ರಾಷ್ಟ್ರಗಳ ಪ್ರಮುಖ ವಿಶ್ವವಿದ್ಯಾಲಯಗಳ ವಿರುದ್ಧ ಉತ್ಕೃಷ್ಟ ವಾದದ ಅಂತಿಮ ಹಂತದಲ್ಲಿ ಇಂಡೋನೇಶಿಯಾ ವಿರುದ್ಧ ಜಯ ಸಾಧಿಸಿತು.
ದಾರುಲ್ ಹುದಾ ಇಸ್ಲಾಮಿಕ್ ವಿಶ್ವವಿದ್ಯಾನಿಲಯದ ಈ ಸಾಧನೆಯು ಭಾರತದ ಯುವ ಪೀಳಿಗೆಯ ಅರಬಿ ಭಾಷಾ ಪ್ರಾವೀಣ್ಯತೆ, ಚಿಂತನಾ ಸಾಮರ್ಥ್ಯ ಮತ್ತು ಸಂವಾದದ ಸಂಸ್ಕಾರವನ್ನು ವಿಶ್ವದ ವೇದಿಕೆಯಲ್ಲಿ ಪ್ರತಿಬಿಂಬಿಸಿದೆ ಎಂದು ಪ್ರಕಟನೆ ತಿಳಿಸಿದೆ.