ಗಾಂಜಾ ಮಾರಾಟಕ್ಕೆ ಯತ್ನ: ಆರೋಪಿ ಬಂಧನ
Update: 2023-08-03 22:58 IST
ಬಜ್ಪೆ, ಆ.3: ಇಲ್ಲಿನ ಗುರುಪುರ ಮೂಳೂರು ಗ್ರಾಮದ ಬಂಗ್ಲಗುಡ್ಡೆ ಸೈಟ್‌ಗೆ ಹೋಗುವ ರಸ್ತೆಯಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಓರ್ವನ್ನನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತನ್ನು ಗುರುಪುರ ಮೂಳೂರು ಗ್ರಾಮದ ನಿವಾಸಿ ನವಾಜ್ (30) ಎಂದು ಗುರುತಿಸಲಾಗಿದೆ. ಈತನಿಂದ 430 ಗ್ರಾಂ ತೂಕದ ಅಂದಾಜು 8 ಸಾವಿರ ರೂ. ಮೌಲ್ಯದ ಗಾಂಜಾ, 50 ಸಾವಿರ ರೂ. ಮೌಲ್ಯದ ಒಂದು ಬೈಕ್, 500 ರೂ. ಮೌಲ್ಯದ ತೂಕ ಮಾಪಕ, ಒಂದು ಮೊಬೈಲ್ ಹಾಗೂ ಪರಿಕರಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.