ಮಂಗಳೂರು| ಅಜುಮ್ ಅಲ್‌ಬಿರ್ರ್ ಸ್ಕೂಲ್‌ನಲ್ಲಿ ಕಿಡ್ಸ್ ಫೆಸ್ಟ್: ಅಲ್‌ಬಿರ್ರ್ ಸ್ಕೂಲ್ ಅಡ್ಡೂರು ಉತ್ತಮ ಸಾಧನೆ
ಮಂಗಳೂರು: ಅಜುಮ್ ಅಲ್‌ಬಿರ್ರ್ ಸ್ಕೂಲ್‌ನಲ್ಲಿ ಇತ್ತೀಚೆಗೆ ಆಯೋಜಿಸಲಾದ ಅಲ್‌ಬಿರ್ರ್ ಕಿಡ್ಸ್ ಫೆಸ್ಟ್ ಕಾರ್ಯಕ್ರಮದಲ್ಲಿ ಅಲ್‌ಬಿರ್ರ್ ಸ್ಕೂಲ್ ಅಡ್ಡೂರು ವಿದ್ಯಾರ್ಥಿಗಳು ಉತ್ತಮ ಪ್ರತಿಭೆಯನ್ನು ಪ್ರದರ್ಶಿಸಿ ಪ್ರೀ-ಪ್ರೈಮರಿ ಮತ್ತು ಪ್ರೈಮರಿ ವಿಭಾಗಗಳಲ್ಲಿ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಇದೇ ಸಂದರ್ಭ ನಡೆದ ವಿಜ್ಞಾನ ಮೇಳ (ಸೈನ್ಸ್ ಫೇರ್) ಸ್ಪರ್ಧೆಯಲ್ಲಿಯೂ ಅಲ್‌ಬಿರ್ರ್ ಸ್ಕೂಲ್ ಅಡ್ಡೂರು ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದೆ. ಅಲ್ಲದೆ, ವಿವಿಧ ಸಾಂಸ್ಕೃತಿಕ ಮತ್ತು ಕಲಾತ್ಮಕ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಕಲಾತಿಲಕ ಹಾಗೂ ಕಲಾಪ್ರತಿಭಾ ಪ್ರಶಸ್ತಿಗಳನ್ನು ಪಡೆದು ಶಾಲೆಗೆ ಹೆಮ್ಮೆ, ಕೀರ್ತಿಯನ್ನೂ ತಂದಿದ್ದಾರೆ.
ವಿದ್ಯಾರ್ಥಿಗಳ ಸತತ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಹಾಗೂ ಪೋಷಕರ ಸಹಕಾರದಿಂದ ಈ ಮಹತ್ವದ ಸಾಧನೆ ಸಾಧ್ಯವಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೂ, ಮಾರ್ಗದರ್ಶನ ನೀಡಿದ ಶಿಕ್ಷಕರಿಗೂ ಹಾಗೂ ಬೆಂಬಲ ನೀಡಿದ ಪೋಷಕರಿಗೂ ಶಾಲಾ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.
ಈ ಸಾಧನೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳನ್ನು ಇನ್ನಷ್ಟು ಉತ್ತಮ ಸಾಧನೆಗೆ ಪ್ರೇರೇಪಿಸಲಿದೆ ಎಂಬ ವಿಶ್ವಾಸವನ್ನು ಶಾಲಾ ಆಡಳಿತ ಮಂಡಳಿ ವ್ಯಕ್ತಪಡಿಸಿದೆ.