×
Ad

ಬಜ್ಪೆ | ಮರವೂರಿನಲ್ಲಿ ನದಿಪಾಲಾಗಿದ್ದ ಮತ್ತೋರ್ವ ಯುವಕನ ಮೃತದೇಹ ಪತ್ತೆ

Update: 2024-10-01 13:29 IST

ಬಜ್ಪೆ: ಇಲ್ಲಿನ ಮರವೂರಿನ ಫಲ್ಗುಣಿ ನದಿಯಲ್ಲಿ ಎರಡು ದಿನಗಳ ಹಿಂದೆ ಈಜಲು ತೆರಳಿ ನಾಪತ್ತೆಯಾಗಿದ್ದ ಕೊಟ್ಟಾರ ಚೌಕಿ ನಿವಾಸಿ ಸುಮಿತ್ (20) ಅವರ ಮೃತದೇಹ ಮಂಗಳವಾರ ಬೆಳಗ್ಗೆ ಪತ್ತೆಯಾಗಿದೆ.

ನಾಲ್ವರು ಸ್ನೇಹಿತರು ರವಿವಾರ ಸಂಜೆ ಮರವೂರಿನ ಫಲ್ಗುಣಿ ನದಿಯಲ್ಲಿ ಈಜಾಡಲೆಂದು ಬಂದಿದ್ದರು. ಈ ಪೈಕಿ ಕೊಟ್ಟಾರ ಚೌಕಿ ನಿವಾಸಿ ಸುಮಿತ್, ಉರ್ವ ಅಂಗಡಿ ನಿವಾಸಿ ಅನೀಶ್ ನದಿಯಲ್ಲಿ ನಾಪತ್ತೆಯಾಗಿದ್ದರು. ಈ ಪೈಕಿ ಉರ್ವ ಅಂಗಡಿ ನಿವಾಸಿ ಅನೀಶ್ ಅವರ ಮೃತದೇಹ ಸೋಮವಾರ ಪತ್ತೆಯಾಗಿತ್ತು. ಸುಮಿತ್ ರಿಗಾಗಿ ಎನ್ ಡಿ ಆರ್ ಎಫ್ ಮತ್ತು ಎಸ್ ಟಿ ಆರ್ ಎಫ್ ತಂಡಗಳು ಕಾರ್ಯಾಚರಣೆ ಮುಂದುವರಿಸಿದ್ದವು. ಇಂದು ಅವರ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನದಿಯಲ್ಲಿ ಈಜಲು ತೆರಳಿದ್ದ ನಾಲ್ವರ ಪೈಕಿ ಕೋಡಿಕಲ್ ನಿವಾಸಿ ಅರುಣ್ ಮತ್ತು ಕೋಡಿಕಲ್ ಮಾಳೂರು ನಿವಾಸಿ ದೀಕ್ಷಿತ್ ಪ್ರಾಣಾಪಾಯದಿಂದ ಪಾರಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News