×
Ad

ಬಾಳೆಪುಣಿ ಗ್ರಾ.ಪಂ. ಅಧ್ಯಕ್ಷರಾಗಿ ಸುಕನ್ಯ, ಉಪಾಧ್ಯಕ್ಷರಾಗಿ ಬಶೀರ್ ಮುಡಿಪು ಆಯ್ಕೆ

Update: 2023-08-16 18:57 IST

ಕೊಣಾಜೆ: ಬಾಳೆಪುಣಿ ಗ್ರಾಮ ಪಂಚಾಯತಿಯ ಎರಡನೇ ಅವಧಿಗೆ ಅಧ್ಯಕ್ಷರಾಗಿ ಸುಕನ್ಯ ರೈ ಮೂಳೂರುಗುತ್ತು ಹಾಗೂ ಉಪಾಧ್ಯಕ್ಷರಾಗಿ ಎಂ.ಎ.ಬಶೀರ್ ಮುಡಿಪು ಅವರು ಆಯ್ಕೆಗೊಂಡರು.

29 ಸದಸ್ಯ ಬಲವಿರುವ ಬಾಳೆಪುಣಿ ಗ್ರಾಮ ಪಂಚಾಯತಿಯಲ್ಲಿ ಕಾಂಗ್ರೆಸ್ ಬೆಂಬಲಿತರು 19, ಬಿಜೆಪಿ ಬೆಂಬಲಿತರು 7 ಹಾಗೂ 3 ಪಕ್ಷೇತರ ಅಭ್ಯರ್ಥಿಗಳಿದ್ದಾರೆ.

ಬುಧವಾರ ನಡೆದ ಚುನಾವಣೆ‌ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸುಕನ್ಯ ಅಧ್ಯಕ್ಷರಾಗಿ ಹಾಗೂ ಬಶೀರ್ ಮುಡಿಪು ಅವರು ಅವಿರೋಧವಾಗಿ ಉಪಾಧ್ಯಕ್ಷರಾಗಿ ಆಯ್ಕೆಗೊಂಡರು.

ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ‌ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಶಾಂತ್ ಕಾಜವ, ಮಾಜಿ‌ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ಮುಖಂಡರಾದ ಜಲೀಲ್ ಮೋಂಟುಗೋಳಿ,‌ ಎನ್ ಎಸ್ ನಾಸೀರ್ ನಡುಪದವು, ಇಬ್ರಾಹಿಂ ನಡುಪದವು, ಪದನಾಭ ನರಿಂಗಾನ, ಹೈದರ್ ಕೈರಂಗಳ, ಮುಸ್ತಫಾ ಬದ್ರಿಯಾ, ಅಹ್ಮದ್ ಸಲೀಂ ಮುಡಿಪು, ಮೊಯ್ದಿನ್ ಹಾಜಿ ತೋಟಾಲ್, ಅರುಣ್ ಡಿಸೋಜಾ ಮುಡಿಪು, ಪಂಚಾಯತಿ ಅಭಿವೃದ್ಧಿ ಅಧಿಕಾರಿ ವೆಂಕಟೇಶ್ ಮೊದಲಾದವರು ಉಪಸ್ಥಿತರಿದ್ದರು.

ಚುನಾವಣಾಧಿಕಾರಿಯಾಗಿ‌ ಮಂಗಳೂರು ಲೋಕಪೋಯೋಗಿ ಇಲಾಖೆಯ ಸ್ವಾಮಿ ಕೊಟ್ರೇಶ್ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News