ಬೆಳ್ತಂಗಡಿ | ಡಿ.12ರಂದು ಮಾದರಿ ಮದುವೆ: ಜಮಾಅತ್ ಪ್ರತಿನಿಧಿಗಳ ಸಂಗಮ
ಸಾಂದರ್ಭಿಕ ಚಿತ್ರ | Photo Credit : freepik
ಬೆಳ್ತಂಗಡಿ, ಡಿ.10: ಮದುವೆಯ ಹೆಸರಿನಲ್ಲಿ ನಡೆಯುವ ಅನಾಚಾರ ಮತ್ತು ದುಂದುಬೆಚ್ಚಗಳನ್ನು ತಡೆಗಟ್ಟುವ ಸಲುವಾಗಿ ಎಸ್‌ವೈಎಸ್ ಕರ್ನಾಟಕ ರಾಜ್ಯ ಸಮಿತಿಯು ಹಮ್ಮಿಕೊಂಡ ಱಮಾದರಿ ಮದುವೆ: ಶತದಿನ ಅಭಿಯಾನ’ದ ಪ್ರಯುಕ್ತ ಎಸ್‌ವೈಎಸ್ ಬೆಳ್ತಂಗಡಿ ರೆನ್ ಜಮಾಅತ್ ಪ್ರತಿನಿಧಿಗಳ ಸಂಗಮವು ಡಿ.12ರಂದು ಅಪರಾಹ್ನ 3ಕ್ಕೆ ಗುರುವಾಯನಕೆರೆ ಮಸೀದಿ ಹಾಲ್ ನಲ್ಲಿ ನಡೆಯಲಿದೆ.
ಎಸ್‌ವೈಎಸ್ ರೆನ್ ಅಧ್ಯಕ್ಷ ಅಬ್ದುಲ್ ರಹ್ಮಾನ್ ಸಖಾಫಿ ಆಲಟದಿಲ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಸ್ಸಯ್ಯದ್ ಇಸ್ಮಾಯಿಲ್ ಅಲ್ಹಾದಿ ತಂಞಳ್ ಉಜಿರೆ ದುಆಕ್ಕೆ ನೇತೃತ್ವ ನೀಡಲಿದ್ದಾರೆ. ಅಸ್ಸಯ್ಯದ್ ಅಬ್ದುಲ್ ರಹ್ಮಾನ್ ಬಾ-ಅಲವಿ ಸಾದಾತ್ ತಂಞಳ್ ಕುಪ್ಪೆಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ ಡಾ.ಎಂಎಸ್ಸೆಎಂ ಅಬ್ದುಲ್ ರಶೀದ್ ಝ್ಯೆನಿ ಕಾಮಿಲ್ ಸಖಾಫಿ ಮಾದರಿ ಮದುವೆ ಬಗ್ಗೆ ವಿಷಯ ಮಂಡಿಸಲಿದ್ದಾರೆ ಎಂದು ರೆನ್ ಪ್ರಧಾನ ಕಾರ್ಯದರ್ಶಿ ಸಲೀಂ ಕನ್ಯಾಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.