18ರಂದು ‘ಬಿಗ್ ಶೋ ಇಂಡಿಯಾ 2023’ ಉದ್ಘಾಟನೆ
ಮಂಗಳೂರು, ನ. 13: ಇಂಟೀರಿಯರ್, ಡಿಸೈನಿಂಗ್, ಬಿಲ್ಡಿಂಗ್, ನಿರ್ಮಾಣ, ರಿಯಲ್ ಎಸ್ಟೇಟ್ ಮತ್ತು ತಂತ್ರಜ್ಞಾನವನ್ನು ಒಳಗೊಂಡ ಬಿಗ್ ಶೋ ಇಂಡಿಯಾ 2023 ಪ್ರದರ್ಶನ ನ. 18 ಮತ್ತು 19ರಂದು ಮಂಗಳೂರಿನ ಟಿಎಂಎ ಪೈ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆಯಲಿದೆ.
ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿಯಲ್ಲಿ ಸೋಮವಾರ ಪ್ರದರ್ಶನದ ಬಗ್ಗೆ ಮಾಹಿತಿ ನೀಡಿದ ಝೆಡ್‌ಎಂಝೆಡ್ ಈವೆಂಟ್ಸ್‌ನ ಆಡಳಿತ ನಿರ್ದೇಶಕರಾದ ಝಹೀರ್ ಅಹ್ಮದ್, ನ. 18ರಂದು ಬೆಳಗ್ಗೆ 9.30ಕ್ಕೆ ಪ್ರದರ್ಶನ ಉದ್ಘಾಟನೆಗೊಳ್ಳಲಿದ್ದು, ಸೌದಿ ಅರೇಬಿಯಾದ ಎಕ್ಸಪಟೈಸ್ ಕಾಂಟ್ರಾಕ್ಟಿಂಗ್ ಕಂಪನಿಯ ಅಧ್ಯಕ್ಷ ಹಾಗೂ ಸಿಇಒ ಮುಹಮ್ಮದ್ ಅಶ್ರಫ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.
ಆರ್ಕಿಟೆಕ್ಟ್, ಕಟ್ಟಡ ನಿರ್ಮಾಣ ಹಾಗೂ ಇಂಟೀರಿಯರ್‌ಗೆ ಸಂಬಂಧಿಸಿದ ವಿವಿಧ ಬ್ರಾಂಡ್‌ಗಳ 50ಕ್ಕೂ ಹೆಚ್ಚಿನ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸುವ ಜತೆಗೆ ಮಾಹಿತಿಯನ್ನೂ ನೀಡಲಿವೆ. ಕಳೆದ ವರ್ಷ 8000ಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದು, ವಿವಿಧ ರಾಜ್ಯ, ಜಿಲ್ಲೆಗಳ ವಾಸ್ತುಶಿಲ್ಪಿಗಳು ಆಗಮಿಸಿದ್ದರು ಎಂದು ಅವರು ಹೇಳಿದರು.
ಬಿಗ್ ಶೋ ಪ್ರದರ್ಶನದಲ್ಲಿ ಕಳೆದ ಬಾರಿ ಪ್ರಥಮ ಭಾಗವಹಿಸುವಿಕೆಯಲ್ಲೇ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರಕಿತ್ತು. ಈ ಬಾರಿ ಸಂಸ್ಥೆಯು ಪ್ರದರ್ಶನದಲ್ಲಿ ಟೈಟಲ್ ಪ್ರಾಯೋಜಕರಾಗಿ ಭಾಗವಹಿಸುತ್ತಿದೆ ಎಂದು ಝಿಂಟೆರಿಯೋ ಸಂಸ್ಥೆಯ ನಿರ್ದೇಶಕ ನಯೀಮ್ ಬಾಜಿ ಹೇಳಿದರು.
ಪ್ರಾಜೆಕ್ಟ್ ಮ್ಯಾನೇಜರ್ ರಕ್ಷಿತಾ ಶೆಟ್ಟಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇಂಟೀರಿಯರ್ ಡಿಸೈರ್ನ್ಸ್‌ನ ಸದಸ್ಯರಾದ ಶೇಕ್ ಇಮಾದ್ ಗೋಷ್ಟಿಯಲ್ಲಿ ಉಪಸ್ಥಿತರಿದ್ದರು.