×
Ad

ಬಿಕರ್ನಕಟ್ಟೆ: ಬೈಕ್ ಪಲ್ಟಿಯಾಗಿ ಸವಾರ ಮೃತ್ಯು

Update: 2023-07-31 21:55 IST

ಮಂಗಳೂರು, ಜು.31: ನಗರದ ಬಿಕರ್ನಕಟ್ಟೆ ಬಳಿ ಬೈಕ್ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಸವಾರ ಮೃತಪಟ್ಟ ಘಟನೆ ರವಿವಾರ ರಾತ್ರಿ ನಡೆದಿದೆ.

ಕೋಡಿಕಲ್ ನಿವಾಸಿ, ನಗರದ ಖಾಸಗಿ ಕಾಲೇಜೊಂದರ ವಿದ್ಯಾರ್ಥಿ ಅಂಕಿತ್ ಜಿ. (21) ಮೃತಪಟ್ಟ ಬೈಕ್ ಸವಾರ.

ಜು.30ರಂದು ರಾತ್ರಿ 10:32ಕ್ಕೆ ಅಂಕಿತ್ ಜಿ. ಎಂಬವರು ಆರ್ಯನ್‌ರನ್ನು ಕುಲಶೇಖರ ಕೈಕಂಬದಲ್ಲಿ ಬಿಟ್ಟು ಕೋಡಿಕಲ್‌ನಲ್ಲಿರುವ ತನ್ನ ಮನೆಗೆ ಮರಳುವಾಗ ಬಿಕರ್ನಕಟ್ಟೆಯಲ್ಲಿರುವ ಚರ್ಚ್ ದ್ವಾರದ ಮುಂದೆ ಬೈಕ್ ನಿಯಂತ್ರಣ ತಪ್ಪಿ ಅಲ್ಲೇ ಪಾರ್ಕ್ ಮಾಡಿದ್ದ ಓಮ್ನಿ ಕಾರಿಗೆ ಬಡಿದಿದೆ. ಇದಾದ ನಂತರ ಮನೆಯ ಕಾಂಪೌಂಡ್ ಹಾಲ್‌ಗೆ ಡಿಕ್ಕಿಯಾಗಿ ಬೈಕ್ ನಜ್ಜುಗುಜ್ಜಾಗಿದೆ.

ಈ ದಾರಿಯಲ್ಲಿ ಸಾಗುತ್ತಿದ್ದ ಇಬ್ಬರು ಯುವಕರು ತಕ್ಷಣ ಅಂಕಿತ್ ಅವರನ್ನು ನಗರದ ಆಸ್ಪತ್ರೆಗೆ ಸಾಗಿಸಿದರು. ಆದರೆ ಆಗಲೇ ಅಂಕಿತ್ ಸಾವಿಗೀಡಾಗಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಪ್ರತಿಭಾನ್ವಿತ ವಿದ್ಯಾರ್ಥಿಯಾಗಿರುವ ಅಂಕಿತ್ ನಗರದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದರು. ತಂದೆ, ತಾಯಿ ಮತ್ತು ಅಣ್ಣ ಸಹಿತ ಅಪಾರ ಬಂಧುಮಿತ್ರರನ್ನು ಅಂಕಿತ್ ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News