×
Ad

ಉಪ್ಪಿನಂಗಡಿ | ಬಿಳಿಯೂರು ಅಣೆಕಟ್ಟು: ಎಲ್ಲಾ ಗೇಟು ತೆರವು

Update: 2025-05-31 00:07 IST

ಉಪ್ಪಿನಂಗಡಿ: ಅಕಾಲಿಕ ಮಳೆಯಿಂದಾಗಿ ನದಿ ನೀರಿನ ಹರಿಯುವಿಕೆಯಲ್ಲಿ ಗಣನೀಯ ಹೆಚ್ಚಳವುಂಟಾಗಿ ನೇತ್ರಾವತಿ ನದಿಗೆ ಬಿಳಿಯೂರು ಎಂಬಲ್ಲಿ ನಿರ್ಮಿಸಲಾದ ಅಣೆಕಟ್ಟಿನ ಗೇಟು ತೆರವು ಕಾರ್ಯಾಚರಣೆಯಲ್ಲಿ ಆಗಿದ್ದ ತೊಡಕನ್ನು ನಿವಾರಿಸಲಾಗಿದ್ದು, ಎಲ್ಲಾ 42 ಗೇಟುಗಳನ್ನು ತೆರವುಗೊಳಿಸಿ ನದಿಯನ್ನು ಸಹಜ ಹರಿಯುವಿಕೆಗೆ ಒಳಪಡಿಸಲಾಗಿದೆ.

ಪರಿಸರದಾದ್ಯಂತ ಮಳೆ ಸುರಿದು ನದಿಯ ನೀರಿನ ಮಟ್ಟದಲ್ಲಿ ಹೆಚ್ಚಳ ಕಂಡು ಬಂದ ಹಿನ್ನೆಲೆಯಲ್ಲಿ ಅಣೆಕಟ್ಟಿನ ಗೇಟು ತೆರವು ಮಾಡಲು ಕಾರ್ಯಾಚರಣೆ ಪ್ರಾರಂಭವಾಗುತ್ತಿದ್ದಂತೆಯೇ ಬಿರುಸು ಪಡೆದ ಮಳೆ ಎಲ್ಲೆಡೆ ಭಾರೀ ಪ್ರಮಾಣದಲ್ಲಿ ಸುರಿದು ನದಿ ಮೈ ತುಂಬಿ ಹರಿಯಲಾರಂಭಿಸಿತ್ತು. ಆ ವೇಳೆ 9 ಗೇಟುಗಳನ್ನು ಪೂರ್ಣ ಪ್ರಮಾಣದಲ್ಲಿ ಮತ್ತು ಆರು ಗೇಟುಗಳನ್ನು ಅಲ್ಪ ಪ್ರಮಾಣದಲ್ಲಿ ತೆರವು ಮಾಡಲಾಗಿತ್ತಾದರೂ, ನದಿಯ ನೀರಿನ ಪ್ರವಾಹಕ್ಕೆ ಉಳಿದ ಗೇಟುಗಳ ತೆರವು ಕಾರ್ಯಾಚರಣೆಗೆ ಅಡೆತಡೆಯುಂಟಾಗಿತ್ತು. ನದಿಯಲ್ಲಿ ಮರದ ದಿಮ್ಮಿಗಳು ಮತ್ತು ಕಸಕಡ್ಡಿಗಳು ಯಥೇಚ್ಚಾ ಪ್ರಮಾಣದಲ್ಲಿ ಹರಿದು ಬಂದು ಅಣೆಕಟ್ಟಿನ ಗೇಟುಗಳಲ್ಲಿ ಸಿಲುಕಿಕೊಂಡಿತ್ತು.

ಈ ಎಲ್ಲಾ ಸೂಕ್ಷ್ಮತೆಯ ನಡುವೆ ಗೇಟು ತೆರವು ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಶುಕ್ರವಾರ ಸಂಜೆಯ ವೇಳೆಗೆ ಎಲ್ಲಾ ಗೇಟುಗಳನ್ನು ಸುರಕ್ಷಿತವಾಗಿ ತೆರವುಗೊಳಿಸುವಲ್ಲಿ ಸಫಲರಾದರು. ತನ್ಮೂಲಕ ಮಳೆಗಾಲದ ಸಮಯದಲ್ಲಿ ನದಿ ಸಹಜವಾಗಿ ಹರಿಯುವಂತಾಗಲು ಕ್ರಮ ಕೈಗೊಂಡರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News