ಗಾರ್ಡಿಯನ್ ಏಂಜಲ್ ಚರ್ಚ್‌ಗೆ ಮಂಗಳೂರು ಬಿಷಪ್ ಭೇಟಿ
Update: 2023-08-18 17:41 IST
ಮಂಗಳೂರು, ಆ.18: ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನಾ ಅವರು ಇತ್ತೀಚೆಗೆ ನಾಗುರಿಯ ಗಾರ್ಡಿಯನ್ ಏಂಜಲ್ ಚರ್ಚ್‌ಗೆ ಭೇಟಿ ನೀಡಿದರು.
ಧರ್ಮಕ್ಷೇತ್ರದ ಪ್ರಧಾನ ಧರ್ಮಗುರು ವಂ. ವಿಲಿಯಂ ಮಿನೇಜಸ್, ಸಹಾಯಕ ಧರ್ಮಗುರು ವಂ. ಜೆರಾಲ್ಡ್ ಪಿಂಟೊ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಪಾವ್ಲ್ ರೊಡ್ರಿಗಸ್, ಕಾರ್ಯದರ್ಶಿ ಲೊಲಿನಾ ಡಿಸೋಜಾ ಹಾಗೂ 21 ಆಯೋಗಗಳ ಸಂಯೋಜಕಿ ರೆನಿಟಾ ಮಿನೇಜಸ್ ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ಬಲಿಪೂಜೆ ನಡೆಸಿದ ಬಿಷಪರು 53 ಮಕ್ಕಳಿಗೆ ದೃಢೀಕರಣದ ಸಂಸ್ಕಾರವನ್ನು ನೀಡಿದರು. ಬಲಿಪೂಜೆಯ ಬಳಿಕ ಚರ್ಚ್ ಆರ್ಥಿಕ ಸಮಿತಿ ಹಾಗೂ ಪಾಲನಾ ಸಮಿತಿಯ ಸದಸ್ಯರೊಡನೆ ಚರ್ಚಿಸಿದರು.