ಬಿಜೆಪಿ ಮುಖಂಡ ಸಂತೋಷ್ ಕುಮಾರ್ ರೈ ಬೋಳಿಯಾರ್ 59ನೇ ಹುಟ್ಟುಹಬ್ಬ ಆಚರಣೆ
ಕೊಣಾಜೆ : ಬೆಂಗಳೂರಿನ ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ನ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರ 59ನೇ ಜನ್ಮ ದಿನಾಚರಣೆ ಅಸೈಗೋಳಿಯ ಅಭಯಾಶ್ರಯದಲ್ಲಿ ರವಿವಾರ ನಡೆಯಿತು.
ಈ ಸಂದರ್ಭ ಆರ್ಥಿಕವಾಗಿ ಹಿಂದುಳಿದ ಅರ್ಹ ಎರಡು ಕುಟುಂಬಗಳಾದ ಬೋವಿ ಸಮಾಜದ ಗುರಿಕಾರ ರವೀಂದ್ರ ಬೆಳ್ಚಪ್ಪಾಡ ಮತ್ತು ಕುಲಾಲ ಸಮಾಜದ ರುಕ್ಮಯ ಕುಲಾಲ್ ಕುರ್ನಾಡು ಅವರ ಕುಟುಂಬಕ್ಕೆ ಉಚಿತ ಮನೆ ನಿರ್ಮಿಸಿಕೊಡುವುದಾಗಿ ಘೋಷಿಸಿ ಎರಡು ಮನೆಗಳ ನೀಲನಕ್ಷೆ ಅನಾವರಣಗೊಳಿಸಿದರು.
ಕಾರ್ಯಕ್ರಮದಲ್ಲಿ ಶುಭಾಶಯದ ಮಾತುಗಳನ್ನಾಡಿದ ಶಾರದಾಗಣಪತಿ ವಿದ್ಯಾ ಕೇಂದ್ರದ ಸಂಚಾಲಕ ಟಿ. ಜಿ. ರಾಜರಾಮ್ ಭಟ್ ಮನುಷ್ಯ ಮನುಷ್ಯತ್ವದಿಂದ ಬದುಕಿದಾಗ ಅದು ನಿಜಾರ್ಥದ ಬದುಕಾಗುತ್ತದೆ. ಸೇವೆ, ಪರೋಪಕಾರ, ಜನಾನುರಾಗದ ಜೀವನ ಎಲ್ಲರ ಮನ ಮನೆಗಳನ್ನು ಗೆಲ್ಲುತ್ತದೆ ಎಂದರು.
ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರ ಪತ್ನಿ ವೀಣಾ ಸಂತೋಷ್ ಕುಮಾರ್, ಬಿಜೆಪಿ ಮಂಗಳೂರು ಮಂಡಲ ಮಾಜಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಅಭಯಾಶ್ರಯದ ಸಂಚಾಲಕ ಶ್ರೀನಾಥ್ ಹೆಗ್ಡೆ, ಜಿಲ್ಲಾ ಮಾಜಿ ಒಂಬುಡ್ಸ್ ಮೆನ್ ಶೀನ ಶೆಟ್ಟಿ, ಮುಡಿಪಿನ ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಇನೋಳಿ ಶ್ರೀ ಸೋಮನಾಥ ದುರ್ಗಾ ಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ್ ಪೂಂಜ ಕಿಲ್ಲೂರುಗುತ್ತು, ಉದ್ಯಮಿ ರಾಧಾಕೃಷ್ಣ ರೈ ಉಮಿಯ, ಸೋಮೇಶ್ವರ ಪುರಸಭೆಯ ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ, ನವೀನ್ ಪಾದಲ್ಪಾಡಿ, ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ರವಿ ರೈ ಪಜೀರು ಕಾರ್ಯಕ್ರಮ ನಿರೂಪಿಸಿದರು.