ಕಿನ್ನಿಗೋಳಿ ಪಟ್ಟಣ ಪಂಚಾಯತ್ ನಲ್ಲಿ ಬಿಜೆಪಿಗೆ ಗೆಲುವು
ಮುಲ್ಕಿ: ಕಿನ್ನಿಗೋಳಿ ಪಟ್ಟಣ ಪಂಚಾಯತ್ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಗೆಲುವು ಸಾಧಿಸಿದೆ.
ಒಟ್ಟು 18 ಕ್ಷೇತ್ರಗಳನ್ನು ಹೊಂದಿರುವ ಕಿನ್ನಿಗೋಳಿ ಪಟ್ಟಣ ಪಂಚಾಯತ್ ನಲ್ಲಿ ಬಿಜೆಪಿಗೆ 10 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ ಕಾಂಗ್ರೆಸ್ 8 ಕ್ಷೇತ್ರಗಳಲ್ಲಿ ಜಯ ಗಳಿಸಿದೆ.
ಕಿನ್ನಿಗೋಳಿ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿದ ನಾಲ್ಕು ವರ್ಷಗಳ ಬಳಿಕ ಡಿಸೆಂಬರ್ 21ರಂದು ಪ್ರಥಮ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸುವಲ್ಲಿ ಯಶಸ್ವಿಯಾಗಿದೆ.
ಜಯ ಗಳಿಸಿದವರ ವಿವರ
ಪದ್ಮಲತಾ ರಾವ್ (ಕಟೀಲು, ಬಿಜೆಪಿ), ಲೋಕಯ್ಯ ಸಾಲ್ಯಾನ್ (ಕಟೀಲು, ಬಿಜೆಪಿ), ಶೈಲೇಶ್ ಅಂಚನ್ (ಕಟೀಲು, ಬಿಜೆಪಿ), ಗುರುರಾಜ್ ಮಲ್ಲಿಗೆಯಂಗಡಿ (ಕಟೀಲು, ಬಿಜೆಪಿ), ಗೋಪಾಲ ಪುನರೂರು(ತಾಳಿಪಾಡಿ 11, ಬಿಜೆಪಿ), ಧನುಷ್ ಶೆಟ್ಟಿಗಾರ್ ( ಬಿಜೆಪಿ ತಾಳಿಪಾಡಿ 12)
ತಾಳಿಪಾಡಿ ವಾರ್ಡ್ ನಂಬರ್- 13 ಸುನೀತಾ ರೊಡ್ರಿಗಸ್ ಕಿನ್ನಿಗೋಳಿ(ಕಾಂಗ್ರೆಸ್), ವಾರ್ಡ್ ನಂಬರ್ 10 ಮೆನ್ನ ಬೆಟ್ಟು - ಚಂದ್ರ ರಾಣ್ಯ (ಕಾಂಗ್ರೆಸ್),, ಕಿಲೆoಜೂರು ವಾರ್ಡ್ 5 - ಮಲ್ಲಿಕಾ ಪ್ರಕಾಶ್ (ಬಿಜೆಪಿ), ವಾರ್ಡ್ ನಂಬರ್ 15 - ತಾಳಿಪಾಡಿ ಗುತ್ತಗಾಡು ಮಲ್ಲಿಕಾ (ಬಿಜೆಪಿ), ವಾರ್ಡ್ ನಂ.14- ಸಂತಾನ್ ಡಿಸೋಜ (ಕಾಂಗ್ರೆಸ್), ವಾರ್ಡ್ 6 - ದಾಮೋದರ್ ಶೆಟ್ಟಿ (ಬಿಜೆಪಿ), ವಾರ್ಡ್ ನಂಬರ್ 8 - ಮೆನ್ನಬೆಟ್ಟು-ಪ್ರಕಾಶ್ ಆಚಾರ್ಯ (ಕಾಂಗ್ರೆಸ್), ವಾರ್ಡ್ ನಂ.16 - ಪ್ರಣಿಕ್ ಕಿನ್ನಿಗೋಳಿ(ಬಿಜೆಪಿ), ವಾರ್ಡ್ ನಂ 9 - ಪ್ರತಿಮಾ ಪ್ರಶಾಂತ್ (ಕಾಂಗ್ರೆಸ್), ವಾರ್ಡ್ ನಂ.18 - ಎಳತ್ತೂರು - ಕುಶಲತಾ (ಕಾಂಗ್ರೆಸ್), ವಾರ್ಡ್ ನಂ.15 - ಮಲ್ಲಿಕಾ ಗುತ್ತಗಾಡು (ಬಿಜೆಪಿ), ವಾರ್ಡ್ ನಂಬರ್ 17 - ಸುನೀತಾ (ಕಾಂಗ್ರೆಸ್)
ಮತ ಎಣಿಕೆ ಬಳಿಕ ಬಿಜೆಪಿ ಜಯ ಗಳಿಸುತ್ತಿದ್ದಂತೆ ಕಾರ್ಯಕರ್ತರು ಹರ್ಷೋದ್ಘಾರದಿಂದ ವಿಜಯೋತ್ಸವ ಆಚರಿಸಿದರು .
ಶಾಸಕ ಉಮಾನಾಥ ಕೋಟ್ಯಾನ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುನೀಲ್ ಆಳ್ವ, ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸತೀಶ್ ಅಂಚನ್, ಮಂಡಲಾಧ್ಯಕ್ಷ ದಿನೇಶ್ ಪುತ್ರನ್, ಕಸ್ತೂರಿ ಪಂಜ, ದೇವಿಪ್ರಸಾದ್ ಪುನರೂರು, ಜೀವನ್ ಶೆಟ್ಟಿ ಅಂಗರಗುಡ್ಡೆ ಮತ್ತಿತರರು ಉಪಸ್ಥಿತರಿದ್ದು ವಿಜಯೋತ್ಸವದಲ್ಲಿ ಭಾಗಿಯಾದರು.