×
Ad

ಯುವತಿ ನಾಪತ್ತೆ: ಪ್ರಕರಣ ದಾಖಲು

Update: 2026-03-09 20:23 IST

ಮಂಗಳೂರು,ಮಾ.9: ತೋಟಬೆಂಗ್ರೆಯ ಲೋಕನಾಥ್ ಎಂಬವರ ಬಾಡಿಗೆ ಮನೆಯಲ್ಲಿ ವಾಸವಿದ್ದ ಸಫನಾ (18) ಎಂಬಾಕೆ ಮಾ.6 ರಿಂದ ಕಾಣೆಯಾಗಿದ್ದಾರೆ.

ಎಂದಿನಂತೆ ಬಂದರಿನಲ್ಲಿರುವ ವಿವೇಕ್ ಮಾರ್ಟ್‌ಗೆ ಕೆಲಸಕ್ಕೆಂದು ಹೋದವರು ವಾಪಸ್ ಬಂದಿಲ್ಲ ಎಂದು ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

4.8 ಅಡಿ ಎತ್ತರದ, ಸಾಧಾರಣ ಕಪ್ಪುಮೈಬಣ್ಣದ, ದುಂಡಗಿನ ಶರೀರ ಹೊಂದಿದ್ದು, ಬಿಳಿ ಬಣ್ಣದ ಚೂಡಿದಾರ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದರು. ಹಿಂದಿ ಭೋಜಪುರಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಪಣಂಬೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News