×
Ad

ಸೆಂಟ್ರಲ್ ಕಮಿಟಿ ನಿಯೋಗ ಪೊಲೀಸ್ ಆಯುಕ್ತ-ಎಸ್ಪಿ ಭೇಟಿ

Update: 2026-03-09 20:12 IST

ಮಂಗಳೂರು, ಮಾ.9: ದ.ಕ ಮತ್ತು ಉಡುಪಿ ಜಿಲ್ಲಾ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್‌ರ ನಿರ್ದೇಶನದಂತೆ ರಮಝಾನ್ ಕೊನೆಯ ಹತ್ತರಲ್ಲಿ ಹಾಗೂ ಈದ್ ಸಂದರ್ಭ ವಿಶೇಷ ಪ್ರಾರ್ಥನೆಗೆ ತೆರಳಲಿರುವ ಕಾರಣ ಹೆಚ್ಚಿನ ಭದ್ರತೆಯನ್ನು ಒದಗಿಸುವಂತೆ ಕಮಿಟಿಯ ನಿಯೋಗವು ಮಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ಈ ಸಂದರ್ಭ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷ ಮಾಜಿ ಮೇಯರ್ ಕೆ. ಅಶ್ರಫ್, ಕಾರ್ಯದರ್ಶಿಗಳಾದ ಹಾಜಿ ಅಹ್ಮದ್ ಬಾವ ಪಡೀಲ್, ಹಾಜಿ ಬಿ. ಅಬೂಬಕರ್, ಎಂ.ಎ. ಅಶ್ರಫ್, ಅಬ್ಬಾಸ್ ಉಚ್ಚಿಲ್, ಇಕ್ಬಾಲ್ ಅಹ್ಮದ್ ಮುಲ್ಕಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News