ಬಜಾಲ್: ಫೂಟ್ ಪಲ್ಸ್ ಥೆರಪಿ ಶಿಬಿರಕ್ಕೆ ಚಾಲನೆ
ಮಂಗಳೂರು: ಸೊಸೈಟಿ ಆಫ್ ಸೈಂಟ್ ವಿನ್ಸೆಂಟ್ ಡಿ ಪಾವ್ಲ್, ಹೆಲ್ತ್ ಕಮಿಷನ್ ಬಜಾಲ್ ಚರ್ಚ್ ಹಾಗೂ ಶ್ರೀದೇವಿ ವೆಲ್‌ನೆಸ್ ಸೆಂಟರ್‌ನ ಜಂಟಿ ಆಶ್ರಯದಲ್ಲಿ ಬಜಾಲ್ ಸಂತ ಜೋಸೆಫರ ಹಿ.ಪ್ರಾ.ಶಾಲೆಯ ಸಭಾಂಗಣದಲ್ಲಿ ನಡೆ ಯುವ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರಕ್ಕೆ ರವಿವಾರ ಚಾಲನೆ ನೀಡಲಾಯಿತು. ಮಾ.25ರವರೆಗೆ ಶಿಬಿರ ನಡೆಯಲಿದೆ.
ಬಜಾಲ್ ಚರ್ಚಿನ ಧರ್ಮಗುರು ವಂ.ಫಾ. ಲೀಯೊ ಲೋಬೊ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಶ್ರೀದೇವಿ ವೆಲ್‌ನೆಸ್ ಸೆಂಟರ್‌ನ ವ್ಯವಸ್ಥಾಪಕ ಶ್ರೀಧರ ಪೂಜಾರಿ ಈ ಥೆರಪಿಯ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಬಜಾಲ್ ಚರ್ಚಿನ ಪಾಲನ ಮಂಡಳಿಯ ಉಪಾಧ್ಯಕ್ಷ ದೀಪಕ್ ಡಿಸೋಜ, ಕಾರ್ಯದರ್ಶಿ ಲೀಡಿಯ ಲೋಬೊ, ಸೊಸೈಟಿ ಆಫ್ ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಅಧ್ಯಕ್ಷ ಎಡ್ವಿನ್ ಪಿಂಟೊ, ಹೆಲ್ತ್ ಕಮಿಷನ್‌ನ ಸಂಚಾಲಕ ಗ್ರೇಸಿ ನೊರೊನ್ನಾ, ಬಜಾಲ್ ಚರ್ಚಿನ ಸರ್ವ ಆಯೋಗದ ಸಂಯೋಜಕ ರೊನಾಲ್ಡ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ಗ್ರೇಸಿ ನೊರೊನ್ನಾ ಸ್ವಾಗತಿಸಿದರು. ಗ್ಲೇವಿನ್ ಡಿಸೋಜ ವಂದಿಸಿದರು. ವಿಕ್ಟರ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.