ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಚಂಚಲಾಕ್ಷಿ ನೇಮಕ
Update: 2026-01-27 22:20 IST
ಮಂಗಳೂರು: ಕೊಣಾಜೆ ಗ್ರಾಮದ ಮಾಜಿ ಅಧ್ಯಕ್ಷೆ, ಉಳ್ಳಾಲ ತಾಲೂಕಿನ ಪ್ರಸ್ತುತ ಟ್ರಿಬುನಲ್ ಸದಸ್ಯೆ ಹಾಗೂ ಸಮಾಜ ಸೇವಕಿ ಚಂಚಲಾಕ್ಷಿ ಅವರನ್ನು ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿಯವರ ಆದೇಶ ಮೇರೆಗೆ ಜಿಲ್ಲಾಧ್ಯಕ್ಷರಾದ ಹರೀಶ್ ಕುಮಾರ್ ಅವರ ಅನುಮೋದನೆ ಮೇರೆಗೆ ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ (ನಗರ) ಇದರ ಜಿಲ್ಲಾ ಪ್ರಧಾನ ಕಾರ್ಯದರ್ಶಿಯನ್ನಾಗಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಪ್ಪಿ ಎಸ್. ಅವರು ನೇಮಿಸಿದ್ದಾರೆ.
ಆದೇಶವನ್ನು ವಿಧಾನ ಪರಿಷತ್ತು ಸದಸ್ಯ ಐವನ್ ಡಿಸೋಜಾ ಅವರು ಪಕ್ಷದ ಸಮಾರಂಭದಲ್ಲಿ ಹಸ್ತಾಂತರಿಸಿದರು.