×
Ad

ಉಳ್ಳಾಲ ಸಮ್ಮರ್‌ಸ್ಯಾಂಡ್ ಬೀಚ್ ರೆಸಾರ್ಟ್ ವೆಬ್‌ಸೈಟ್‌ನ್ನು ನಕಲಿ ಮಾಡಿದ ಆರೋಪ: ದೂರು ದಾಖಲು

Update: 2026-01-27 22:47 IST

ಮಂಗಳೂರು, ಜ.27: ಉಳ್ಳಾಲದ ಸಮ್ಮರ್ ಸ್ಯಾಂಡ್ ಬೀಚ್ ರೆಸಾರ್ಟ್ ವೆಬ್‌ಸೈಟ್ ಅನ್ನು ಯಾರೋ ಅಪರಿಚಿತ ವ್ಯಕ್ತಿಗಳು ನಕಲಿ ಮಾಡಿರುವುದಾಗಿ ಸೆನ್ ಪೊಲೀಸರಿಗೆ ದೂರು ನೀಡಲಾಗಿದೆ.

2026 ಜನವರಿ 11 ರಂದು ರೆಸಾರ್ಟ್‌ನ ಅಧಿಕೃತ ವೆಬ್ ಸೈಟ್ www.summersands.in ಅನ್ನು ಯಾರೋ ಅಪರಿಚಿತ ವ್ಯಕ್ತಿಗಳು ನಕಲಿಯಾಗಿ www.summersandresort.com ತೆರೆದಿರುವುದು ಕಂಡು ಬಂದಿರುತ್ತದೆ. ಅಲ್ಲದೇ ಸಂಪರ್ಕಕ್ಕಾಗಿ ಮೊಬೈಲ್ ನಂಬ್ರ:8306912213 ಹಾಗೂ ಇಮೇಲ್ ವಿಳಾಸ: reservation@summersandsresort.com  ಎಂಬುದಾಗಿ ನಕಲಿ ಸೈಟ್ ನಲ್ಲಿ contact us  ಹಾಕಿರುತ್ತಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ಇದರಿಂದ ರೆಸಾರ್ಟ್ ಬುಕ್ ಮಾಡುವ ಅಮಾಯಕ ಪ್ರವಾಸಿಗರನ್ನು ಮತ್ತು ಸಾರ್ವಜನಿಕರನ್ನು ನೇರವಾಗಿ ವಂಚಕರು ತಮ್ಮ ನಕಲಿ ವೆಬ್ ಸೈಟ್‌ಗೆ ಸಂಪರ್ಕ ಹೊಂದಿಕೊಂಡು ನಂತರ ವಂಚಕರು ತಮ್ಮ ವಾಟ್ಸ್ ಆ್ಯಪ್ ನಂಬ್ರ:9772955868ಕ್ಕೆ ಸಂಪರ್ಕಿಸಿಕೊಂಡು ಅದರಲ್ಲಿ ಪ್ರವಾಸಿಗರು ಮತ್ತು ಸಾರ್ವಜನಿಕರಿಗೆ ತಾವು ನೀಡುವ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಹಾಗೂ ರೆಸಾರ್ಟ್ ಬುಕಿಂಗ್ ಹೆಸರಿನಲ್ಲಿ ಮುಂಗಡವಾಗಿ ಹಣ ಪಾವತಿಸಿಕೊಂಡು ಆನ್ ಲೈನ್ ಸುಲಿಗೆ ವಂಚನೆ ಮಾಡಿರುತ್ತಾರೆ ಎಂದು ಉಳ್ಳಾಲ ಸಮ್ಮರ್‌ಸ್ಯಾಂಡ್ ಬೀಚ್ ರೆಸಾರ್ಟ್‌ನ ನಿರ್ದೇಶಕರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಸಮ್ಮರ್ ಸ್ಯಾಂಡ್ ಬೀಚ್‌ನ ರೆಸಾರ್ಟ್ ನ ವ್ಯವಹಾರಕ್ಕಾಗಿ ಅಧಿಕೃತ ವೆಬ್ ಸೈಟ್ ವಿಳಾಸ www.summersands.in ಹಾಗೂ Email ವಿಳಾಸ: summersands@gmail.com & reception@summersands.in ಮತ್ತು ಮೊಬೈಲ್ ನಂಬ್ರಗಳು 9480048888, 9686696969 ಆಗಿರುತ್ತದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News