×
Ad

2024ರ ಲೋಕಸಭಾ ಚುನಾವಣೆಯಲ್ಲಿ ಪ್ಯಾಶಿಸ್ಟರನ್ನು ಸೋಲಿಸಲು ಕಾಮ್ರೇಡ್ ಶಂಕರ್ ಕರೆ

Update: 2023-10-09 19:15 IST

ಬಂಟ್ವಾಳ : ಭಾರತ ಕಮ್ಯೂನಿಸ್ಟ್‌ ‌ಪಕ್ಷ (ಮಾರ್ಕ್ಸ್ ವಾದಿ, ಲೆನಿನ್ ವಾದಿ) ಲಿಬರೇಷನ್ ಬಂಟ್ವಾಳ ತಾಲೂಕು ಸಮ್ಮೇಳನ ಬಿ.ಸಿ.ರೋಡ್ ನಲ್ಲಿ ಜರುಗಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪಕ್ಷದ ಪಾಲಿಟ್ ಬ್ಯೂರೋ ಸದಸ್ಯ ಕಾಮ್ರೇಡ್ ಶಂಕರ್ ಮಾತನಾಡಿ ಇಂದು ದೇಶದ ಆಡಳಿತವು ಪ್ಯಾಶಿಸ್ಟರ ಕೈಯಲ್ಲಿದ್ದು ಈ ದೇಶದ ಸಂವಿಧಾನವನ್ನು ನಾಶ ಮಾಡಿ ಮನುವಾದಿ ವ್ಯವಸ್ಥೆಯನ್ನು ಜಾರಿಗೆ ತರಲು ಹುನ್ನಾರಗಳು ನಡೆಯುತ್ತಿದ್ದು ಅದರ ಭಾಗವಾಗಿ ಸರಕಾರದ ವಿರುದ್ಧ ದ್ವನಿ ಎತ್ತುವವರನ್ನು ಕೊಲೆ ಮಾಡಲಾಗು ತ್ತಿದೆ ಹಾಗೂ ಯು.ಎ.ಪಿ.ಎ ಮುಖಾಂತರ ಜೈಲಿಗಟ್ಟಲಾಗುತ್ತಿದೆ ಎಂದು ಆರೋಪಿಸಿದ ಅವರು ಈ ದೇಶದ ಸಂಸದೀಯ ವ್ಯವಸ್ಥೆಯನ್ನೇ ನಾಶ ಮಾಡುವ ಮೂಲಕ ಒಂದು ದೇಶ ಒಂದು ಚುನಾವಣೆ ಎಂಬುದನ್ನು ಜಾರಿಮಾಡಲು ಹುನ್ನಾರಗಳು ನಡೆಯುತ್ತಿದ್ದು, ಈ ದೇಶಕ್ಕೆ ಅಪಾಯಕಾರಿ ಆಗಿರುವ ಪ್ಯಾಶಿಸಂ ಅನ್ನು ತೊಲಗಿಸಲು ಮುಂಬರುವ ಚುನಾವಣೆಯಲ್ಲಿ ಎಲ್ಲಾ ಜಾತ್ಯಾತೀತ, ಎಡ ಶಕ್ತಿಗಳು ಒಗ್ಗಾಟ್ಟಾಗಿ ಮುಂಬರುವ ಚುನಾವಣೆಯಲ್ಲಿ ಬಿ.ಜೆ.ಪಿ ಯನ್ನು ಸೋಲಿಸುವ ಮೂಲಕ ಈ ದೇಶದ ಸಂವಿಧಾನವನ್ನು ಉಳಿಸಲು ಮುಂದಾಗಬೇಕು ಎಂದು ಕರೆ ನೀಡಿದರು.

ಸಮ್ಮೇಳನವನ್ನು ಪಕ್ಷದ ರಾಜ್ಯ ಸಮಿತಿ ಸದಸ್ಯ ಕಾಮ್ರೇಡ್ ಮೋಹನ್.ಕೆ.ಇ ಉದ್ಘಾಟಿಸಿ, ಕಾಮ್ರೇಡ್ ರಾಮಣ್ಣ ವಿಟ್ಲ ಅದ್ಯಕ್ಷತೆ ವಹಿಸಿದ್ದರು.

ಪಕ್ಷದ ಮಂಗಳೂರು ತಾಲೂಕು ಕಾರ್ಯದರ್ಶಿ ಕಾಮ್ರೇಡ್ ಭರತ್ ಕುಮಾರ್ ಮಾತನಾಡಿದರು ಸಾಮಾಜಿಕ ಕಾರ್ಯ ಕರ್ತರಾದ ರಾಜಾ ಚೆಂಡ್ತಿಮಾರ್, ಸರಸ್ವತಿ ಮಾಣಿ, ಅಶ್ರಪ್ ಕೊಯಿಲ ಅತಿಥಿಗಳಾಗಿ ಭಾಗವಹಿಸಿದ್ದರು.

ಇದೇ ವೇಳೆ ನೂತನ ತಾಲೂಕು ಸಮಿತಿ ರಚಿಸಲಾಯಿತು.

ಕಾರ್ಯದರ್ಶಿಯಾಗಿ ತುಳಸೀದಾಸ್ ವಿಟ್ಲ, ಸದಸ್ಯರುಗಳಾಗಿ ಶಿವರಾಯ ಪ್ರಭು, ಸರಸ್ವತಿ ಮಾಣಿ, ದಿನೇಶ ಆಚಾರಿ ಮಾಣಿ, ದೇವಪ್ಪ ಗೌಡ ಕನ್ಯಾನ, ಸಜೇಶ್ ವಿಟ್ಲ, ಬಾಲಕೃಷ್ಣ ಚೇಳೂರು, ರಾಜಾ ಚೆಂಡ್ತಿಮಾರ್ , ಹಮೀದ್ ಕುಕ್ಕಾಜೆ, ಲಿಯಾಕತ್ ಖಾನ್ , ಆನಂದ ಶೆಟ್ಟಿಗಾರ್ ಆಯ್ಕೆಯಾದರು. ತುಳಸೀದಾಸ್ ವಿಟ್ಲ ಸ್ವಾಗತಿಸಿ, ಸಮ್ಮೇಳನದ ವರದಿ ಮಂಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News