ಆಶ್ರಮವಾಸಿಗಳ ಮೇಲಿನ ಕಾಳಜಿ ದೇವತಾಕಾರ್ಯ: ಸ್ಪೀಕರ್ ಯುಟಿ ಖಾದರ್
ಹೆಲ್ಪ್ ಇಂಡಿಯಾ ಫೌಂಡೇಶನ್ ನಿಂದ ಉಚಿತ ಗಾಳಿ ಕುರ್ಚಿ ವಿತರಣೆ
ಉಳ್ಳಾಲ: ಹೆಲ್ಪ್ ಇಂಡಿಯಾ ಸಂಘಟನೆಯು ಆಶ್ರಮವಾಸಿಗಳಿಗೆ ಕಾಳಜಿಯಿಂದ ಅಗತ್ಯ ಪರಿಕರಗಳನ್ನು ಉಚಿತ ವಾಗಿ ನೀಡಿ ವಿಭಿನ್ನ ಸೇವೆ ಒದಗಿಸುತ್ತಿರು ವುದು ದೇವತಾ ಕಾರ್ಯವಾಗಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ಉಳ್ಳಾಲದ ಹೆಲ್ಪ್ ಇಂಡಿಯಾ ಫೌಂಡೇಶನ್ ವತಿಯಿಂದ ಸೋಮೇಶ್ವರದ ಪಶ್ಚಿಮ್ ರಿಹ್ಯಾಬ್ಲಿಟಿ ಸೆಂಟರ್ ನ ಆಶ್ರಮವಾಸಿಗಳಿಗೆ ನೀಡಲಾದ ಉಚಿತ ಗಾಲಿ ಕುರ್ಚಿಗಳನ್ನು ವಿತರಿಸಿ ಅವರು ಮಾತನಾಡಿದರು.
ಕಷ್ಟ ಜೀವನ ಎಲ್ಲರಿಗೂ ಇರುತ್ತದೆ. ಇದನ್ನು ಎದುರಿಸುವ ಶಕ್ತಿ ನಮ್ಮಲ್ಲಿರಬೇಕು. ಆಶ್ರಮವಾಸಿಗಳಿಗೆ ಉಚಿತವಾಗಿ ಗಾಲಿ ಕುರ್ಚಿಗಳನ್ನು ನೀಡುವ ಮೂಲಕ ಹೆಲ್ಪ್ ಇಂಡಿಯಾ ಸಂಘಟನೆ ದೇವರು ಮೆಚ್ಚುವ ಕೆಲಸ ಮಾಡಿದೆ ಎಂದರು.
ಪಶ್ಚಿಮ್ ರಿಹ್ಯಾಬ್ಲಿಟಿ ಸೆಂಟರ್ ನ ಸ್ಥಾಪಕ ರೋಹಿತ್ ಸಾಂಕ್ತೂಸ್ ಮಾತನಾಡಿ ಹೆಲ್ಪ್ ಇಂಡಿಯಾ ಫೌಂಡೇಶನ್ ನ ಸೇವೆಯನ್ನು ಕೊಂಡಾಡಿದರು.
ಈ ಸಂದರ್ಭದಲ್ಲಿ ಪಶ್ಚಿಮ್ ರಿಹ್ಯಾಬ್ಲಿಟಿ ಸೆಂಟರ್ ನ ಸ್ಥಾಪಕ ರೋಹಿತ್ ಸಾಂಕ್ತೂಸ್ ರನ್ನು ಸ್ಪೀಕರ್ ಯು.ಟಿ.ಖಾದರ್ ಸನ್ಮಾನಿಸಿದರು. ಆಶ್ರಮವಾಸಿ ಸರೋಜ ಅವರು ಭಕ್ತಿಗೀತೆ ಹಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಈ ಕಾರ್ಯಕ್ರಮ ದಲ್ಲಿ ಹೆಲ್ಪ್ ಇಂಡಿಯಾ ಫೌಂಡೇಶನ್ ಸ್ಥಾಪಕಾಧ್ಯಕ್ಷ ರಾಝಿಕ್ ಉಳ್ಳಾಲ್, ಗುತ್ತಿಗೆದಾರ ರಶೀದ್ ಉಳ್ಳಾಲ್, ಉಳ್ಳಾಲ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್,ಸದಸ್ಯರಾದ ಇಬ್ರಾಹಿಂ ಖಲೀಲ್, ಡಾ.ಯು.ಪಿ.ಸುಲೈಮಾನ್ ಶೇಖ್,ಸಂಶುದ್ಧೀನ್,ರಕ್ಷಿತ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಫಾರೂಕ್ ವಂದಿಸಿದರು. ಝಾಕೀರ್ ಇಕ್ಲಾಸ್ ಕಾರ್ಯಕ್ರಮ ನಿರೂಪಿಸಿದರು.