ನರೇಗಾ ಹಿಂದಿನಂತೆ ಮರುಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಿಂದ ಜಿಲ್ಲೆಯಾದ್ಯಂತ ಪ್ರತಿಭಟನೆ: ಐವನ್ ಡಿಸೋಜ
ಮಂಗಳೂರು: ರಾಜ್ಯ ಸರಕಾರದ ಜೊತೆ ಯಾವುದೇ ಸಮಾಲೋಚನೆ ನಡೆಸದೆ ನರೇಗಾ ಯೋಜನೆಯನ್ನು ಬದಲಾಯಿಸಿ ನೂತನ ಹೆಸರಿನ ಯೋಜನೆ ಮಾಡಲು ಹೊರಟಿರುವುದು ಸರಿಯಲ್ಲ, ರಾಜ್ಯದಲ್ಲಿ ನರೇಗಾ ಯಾಥ ಸ್ಥಿತಿ ಯಲ್ಲಿ ಉಳಿಸಲು ಒತ್ತಾಯಿಸಿ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಲಾ ಗುವುದು.ಜ.21ರಂದು ನಗರದ ಪುರಭವನದ ಮುಂಭಾಗದ ಗಾಂಧಿ ಪ್ರತಿಮೆಯ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಮತ್ತು ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿ ಸೋಜ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಹೆಸರು ಬದಲಾವಣೆಯ ಜೊತೆ ರಾಜ್ಯ ಸರಕಾರ ಯೋಜನೆಯ ಶೇ40ರಷ್ಟು ಅನುದಾನ ನೀಡಬೇಕೆಂದು ನೀತಿ ಜಾರಿ ಮಾಡಲಾಗಿದೆ.ಈ ಬಗ್ಗೆ ರಾಜ್ಯ ಸರಕಾರದ ಬಳಿ ಯಾವುದೇ ಸಮಾಲೋಚನೆ ನಡೆಸದೆ ಏಕ ಪಕ್ಷೀಯವಾಗಿ ತೀರ್ಮಾನಿ ಸಲಾಗಿದೆ.ಇದುವರೆಗೆ ಸುಮಾರು ಆರು ರಾಜ್ಯಗಳು ಬದಲಾಯಿಸಲಾದ ಉದ್ಯೋಗ ಖಾತ್ರಿ ಯೋಜನೆಗೆ ರಾಜ್ಯದ ಪಾಲು ಶೇ 40ಭಾಗ ನೀಡಲು ವಿರೋಧಿಸಿದೆ.ಈ ಹಿಂದೆ ಪ್ರತಿ ಗ್ರಾಮ ಪಂಚಾಯತ್ ಈ ಯೋಜನೆ ಯಿಂದ ಒಂದರಿಂದ ಒಂದೂವರೆ ಕೋಟಿ ವಾಋಷಿಕ ಅನುದಾನ ಪಡೆಯುತ್ತಿತ್ತು. 36 ಕೋಟಿ ಮಾನವ ದಿನಗಳ ಉದ್ಯೋಗ ನೀಡಲಾಗು ತ್ತಿರುವ ಈ ಯೋಜನೆಯ ಮೂಲಕ 26ಪರಿಶಿಷ್ಟ ಜಾತಿ,10ಲಕ್ಷ ಪರಿಶಿಷ್ಟ ಪಂಗಡದ ಕುಟುಂಬ ಗಳಿಗೆ ಉದ್ಯೋಗ ದೊರೆಯುತ್ತಿತ್ತು, 16ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಸೃಷ್ಟಿ ಮಾಡಲಾಗು ತ್ತಿರುವ ಯೋಜನೆ. ಇದೀಗ ಕೇಂದ್ರ ಸರಕಾರ ಜನರ ಉದ್ಯೋಗದ ಹಕ್ಕನ್ನು ಕಸಿದು ಕೊಳ್ಳಲು ಹೊರಟಿದೆ ಎಂದು ಐವನ್ ಡಿ ಸೋಜ ತಿಳಿಸಿದ್ದಾರೆ.
ಕೇಂದ್ರ ಸರಕಾರ ಈ ಹಿಂದೆ ಬಜೆಟ್ ನಲ್ಲಿ ಈ ಯೋಜನೆಗೆ ಅನುದಾನ ಕಡಿತಗೊಳಿಸಿತ್ತು. ಇದೀಗ ಯೋಜನೆಯನ್ನು ಸಂಪೂರ್ಣ ವಾಗಿ ಬದಲಾಯಿಸಿ ಬಡವರ ಮೇಲೆ ಬರೆ ಎಳೆದಿದೆ.ರಾಜ್ಯ ಸರಕಾರ ಈ ಬಗ್ಗೆ ವಿಶೇಷ ಅಧಿವೇಶನ ಕರೆದು ಈ ಬಗ್ಗೆ ಚರ್ಚೆ ನಡೆಸಲಿದೆ.ಸುಳ್ಯದಿಂದ ಮೂಲ್ಕಿಯವರೆಗೆ ಕೇಂದ್ರ ಸರಕಾರದ ಈ ಕ್ರಮದ ವಿರುದ್ಧ ಕಾಂಗ್ರೆಸ್ ಫೆ.9ರಿಂದ 12ರವರೆಗೆ ಪಾದಯಾತ್ರೆ ನಡೆಸಿ ಮನರೇಗಾ ಹಿಂದಿನಂತೆ ಯಥಾ ಸ್ಥಿತಿ ಜಾರಿಗೆ ಆಗ್ರಹಿಸಲಾಗುವುದು ಎಂದು ಐವನ್ ಡಿ ಸೋಜ ತಿಳಿಸಿದ್ದಾರೆ.
ಇದು ಬಡವರ ಅನ್ನ ಕಸಿಯುವ ಮತ್ತು ಜನರ ಉದ್ಯೋಗ ದ ಹಕ್ಕನ್ನು ಕಸಿದುಕೊಳ್ಳು ವ ಮತ್ತು ನರೇಗಾ ಯೋಜನೆಯನ್ನು ದುರ್ಬಲಗೊಳಿಸಿ ಸ್ಥಗಿತಗೊಳಿಸುವ ಹುನ್ನಾರವಾಗಿದೆ ಎಂದು ಐವನ್ ಟೀಕಿಸಿದರು.
ಮಹಾತ್ಮಾ ಗಾಂಧಿ ಯವರ ಹೆಸರನ್ನು ಬಿಟ್ಟು ನರೇಗಾ ಯೋಜನೆಯನ್ನು ಮಾಡಿರುವುದಕ್ಕೆ ಕಾಂಗ್ರೆಸ್ ವಿರೋಧ ಮಾಡುತ್ತಿದೆ ಎಂದು ಬಿಜೆಪಿ ಮುಖಂಡರು ಆರೋಪ ಮಾಡುತ್ತಿದ್ದಾರೆ.ಆದರೆ ಯೋಜನೆಯ ಸ್ವರೂಪ ಬದಲು ಮಾಡಿ ಅನುದಾನವನ್ನು ಕಡಿತಗೊಳಿಸಿರುವುದನ್ನು ಕಾಂಗ್ರೆಸ್ ವಿರೋಧಿಸುತ್ತಿದೆ.ರಾಜ್ಯ ಸರಕಾರ ಶೇ 40 ಅನುದಾನದ ನೀಡಲು ಏಕಪಕ್ಷೀಯ ನಿರ್ಧಾರ ಮಾಡಿರುವ ನಿರ್ಧಾರವನ್ನು ಕಾಂಗ್ರೆಸ್ ವಿರೋಧಿ ಸುತ್ತದೆ ಎಂದು ಐವನ್ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿಮುಖ್ಯ ಮಂತ್ರಿ ಪರಿಹಾರ ನಿಧಿಯಿಂದ ಅನಾರೋಗ್ಯ ದಿಂದ ಬಳಲುತ್ತಿರುವ ನಾರಾಯಣ ಕುಲಶೇಖರ, ನಿಶ್ಚಲ್ ಮಂಗಳೂರು, ಅಬ್ದುಲ್ ಖಾದರ್,ಇಬ್ರಾಹಿಂ ಸಜಿಪನಡು,ಉಸ್ಮಾನ್ ಮೂಡುಬಿದಿರೆ, ಅಬೂಬಕ್ಕರ್ ಅಬ್ದುಲ್ ರಜಾಕ್ ಕದ್ರೊಳಿ,ಲಾರೆನ್ಸ ಲೊಬೋ, ಅಹಮದ್ ಬಾವ ಅಡ್ಡೂರು ಇವರಿಗೆ 4.44ಲಕ್ಷ ರೂಪಾಯಿ ಪರಿಹಾರದ ಆದೇಶ ವಿತರಣೆ ಮಾಡಲಾಯಿತು.
ಸುದ್ದಿ ಗೋಷ್ಠಿಯಲ್ಲಿ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮನಪಾ ಮಾಜಿ ಮೇಯರ್ ಶಶಿಧರ ಹೆಗ್ಡೆ,ಅಶ್ರಫ್ ಕೆ, ಮಾಜಿ ಮನಪಾ ಸದಸ್ಯ ನಾಗೇಂದ್ರ, ಅಪ್ಪಿ ,ಭಾಸ್ಕರ್, ಕಾಂಗ್ರೆಸ್ ಪದಾಧಿಕಾರಿಗಳಾದ ಸತೀಶ್ ಪೆಂಗಲ್ , ಜೇನ್ಸ್, ವಿಧ್ಯಾ,ಸತೀಶ್ ಪೆಂಗಲ್ ಮೊದಲಾದವರು ಉಪಸ್ಥಿತರಿದ್ದರು.