ಗ್ರಾಹಕ ಸ್ಪಂದನೆಯ ಸೇವೆಯೇ ಬ್ಯಾಂಕ್ ಗಳ ಪ್ರಮುಖ ಹೊಣೆಗಾರಿಕೆ: ಬೀನಾ ವಹೀದ್
ಮಂಗಳೂರು: ಬ್ಯಾಂಕ್ ಶಾಖೆಗಳಲ್ಲಿ ಗ್ರಾಹಕರಿಗೆ ಉತ್ತಮ ಸೇವೆಯ ವಾತಾವರಣವು ಗ್ರಾಹಕರ ಪ್ರಮುಖ ನಿರೀಕ್ಷೆಯಾಗಿದೆ. ಅದು ಗ್ರಾಹಕರ ವಿಶ್ವಾಸದ ಮೊದಲ ಹೆಜ್ಜೆಯಾಗಿದೆ. ಇಂದಿನ ದಿನಗಳಲ್ಲಿ ಬದ್ಧತೆ, ಶಿಷ್ಟತೆ ಹಾಗೂ ಗ್ರಾಹಕ ಸ್ಪಂದನೆಯ ಸೇವೆಯೇ ಬ್ಯಾಂಕ್ ಗಳ ಪ್ರಮುಖ ಹೊಣೆಗಾರಿಕೆಯಾಗಿದೆ ಎಂದು ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕಿ ಬೀನಾ ವಹೀದ್ ತಿಳಿಸಿದ್ದಾರೆ.
ಅವರು ಬ್ಯಾಂಕ್ ಆಫ್ ಬರೋಡಾ ವತಿ ಯಿಂದ ಮಂಗಳೂರಿನ ಟಿಎಂಎಫೈ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ,ಎಲ್ಲಾ ಶಾಖೆಗಳಲ್ಲಿ ಸತತ ಹಾಗೂ ನಾವೀನ್ಯತೆಯ ಗ್ರಾಹಕ ತೊಡಗಿಸಿಕೊಳ್ಳುವಿಕೆಯ ಅಗತ್ಯವಿದೆ. ಸಿಬ್ಬಂದಿಗೆ ಗ್ರಾಹಕ ಅನುಭವ ಮತ್ತು ಕಾರ್ಯನಿರ್ವಹಣಾ ಶ್ರೇಷ್ಠತೆಯ ಮಹತ್ವವನ್ನು ವಿವರಿಸಿದರು.
ಈ ಸಭೆಯು ಬ್ಯಾಂಕಿನ ತಂತ್ರಾತ್ಮಕ ಆದ್ಯತೆಗಳನ್ನು ನೆಲಮಟ್ಟದ ಜಾರಿಗೆ ಹೊಂದಿಸಲು ಪ್ರಮುಖ ವೇದಿಕೆಯಾಗಿದ್ದು, ಭವಿಷ್ಯದ ಬೆಳವಣಿಗೆಗೆ ‘ಉತ್ತಮ ಗ್ರಾಹಕ ಸೇವೆ’ ಎಂಬುದನ್ನು ಮೂಲಸ್ತಂಭವಾಗಿ ಪರಿಗಣಿಸಿದೆ ಎಂದವರು ತಿಳಿಸಿದ್ದಾರೆ.
ಈ ಸಭೆಯಲ್ಲಿ ಮಂಗಳೂರು ನಗರ ಪ್ರದೇಶ, ಉಡುಪಿ ಪ್ರದೇಶ ಮತ್ತು ಪುತ್ತೂರು ಪ್ರದೇಶದ ಸಿಬ್ಬಂದಿ ಉಪಸ್ಥಿತರಿದ್ದರು. ಇತರ ನಾಲ್ಕು ಪ್ರದೇಶಗಳ ಸಿಬ್ಬಂದಿಯು ಲೈವ್ ವೆಬ್ಕಾಸ್ಟ್ ಮೂಲಕ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.
ಮಂಗಳೂರು ವಲಯದ ಪ್ರಧಾನ ವ್ಯವಸ್ಥಾಪಕರು ಮತ್ತು ವಲಯ ಮುಖ್ಯಸ್ಥರು ವಲಯದ ಮಾರುಕಟ್ಟೆ ಹಂಚಿಕೆ ಹಾಗೂ ಪ್ರಥಮ ತ್ರೈಮಾಸಿಕದಲ್ಲಿ ಗಳಿಸಿದ ಸಾಧನೆಗಳನ್ನು ಪ್ರಸ್ತುತಪಡಿಸಿದರು. ಅವರು ಮೂಲಸೌಕರ್ಯಗಳ ಸುಧಾರಣೆ, ಸಿಬ್ಬಂದಿ ತರಬೇತಿ ಸೇರಿದಂತೆ ಗ್ರಾಹಕ ತೃಪ್ತಿಯನ್ನು ಹೆಚ್ಚಿಸಲು ಜಾರಿಗೆ ತಂದ ಪ್ರಮುಖ ಉಪಕ್ರಮಗಳನ್ನು ವಿವರಿಸಿದರು.
ಶಾಖಾ ತಂಡಗಳ ನಿಷ್ಠೆಯನ್ನು ಅವರು ಪ್ರಶಂಸಿಸಿದರು ಮತ್ತು ಸಂಸ್ಥೆಯ ದೃಷ್ಟಿಕೋಣಕ್ಕೆ ಅನುಗುಣವಾಗಿ ಉನ್ನತ ಪ್ರಮಾಣದ ಕಾರ್ಯಕ್ಷಮತೆಯನ್ನು ಕಾಪಾಡಿಕೊಳ್ಳುವಂತೆ ಪ್ರೋತ್ಸಾಹಿಸಿದರು.ಈ ಉಪಕ್ರಮವು ಗ್ರಾಹಕ ಕೇಂದ್ರೀಕೃತತೆ, ಸ್ಪಂದನೆ ಹಾಗೂ ಪರಿಣಾಮದ ದಿಕ್ಕಿನಲ್ಲಿ ಬ್ಯಾಂಕ್ ಆಫ್ ಬರೋಡಾ ನೀಡುತ್ತಿ ರುವ ನಿರಂತರ ಬದ್ಧತೆಯನ್ನು ತೋರಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಬ್ಯಾಂಕ್ ತನ್ನ ವಲಯ ತ್ರೈಮಾಸಿಕ ಮಾಸಪತ್ರಿಕೆಯಾದ ‘ಮಂಗಳಧ್ವನಿ’ಯ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿತು, ಇದರಲ್ಲಿ ಶ್ರೇಷ್ಠತೆ, ನಾವೀನ್ಯತೆ ಮತ್ತು ಸಾಧನೆಗಳನ್ನು ಸ್ಮರಿಸಲಾಯಿತು.
ಈ ಸಭೆಯಲ್ಲಿ ಮಂಗಳೂರು ನಗರ ಪ್ರದೇಶ, ಉಡುಪಿ ಪ್ರದೇಶ ಮತ್ತು ಪುತ್ತೂರು ಪ್ರದೇಶದ ಸಿಬ್ಬಂದಿ ಉಪಸ್ಥಿತರಿದ್ದರು. ಇತರ ನಾಲ್ಕು ಪ್ರದೇಶಗಳ ಸಿಬ್ಬಂದಿಯು ಲೈವ್ ವೆಬ್ಕಾಸ್ಟ್ ಮೂಲಕ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಕಾರ್ಯನಿ ರ್ವಾಹಕ ನಿರ್ದೇಶಕಿ ಬೀನಾ ವಹೀದ್ ಅವರ ಹಾಗೂ ಪ್ರಧಾನ ವ್ಯವಸ್ಥಾಪಕ ಹಾಗೂ ಮಂಗಳೂರು ವಲಯದ ವಲಯ ಮುಖ್ಯಸ್ಥ ರಾಜೇಶ್ ಖನ್ನಾ ಅವರ ಮಾರ್ಗದರ್ಶನದಲ್ಲಿ ಲೈವ್ ವೆಬ್ಕಾಸ್ಟ್ ನೆರವೇರಿತು.