×
Ad

ದೇರಳಕಟ್ಟೆ: ಶಾಲಾ ವಿದ್ಯಾರ್ಥಿ ನಿಧನ

Update: 2023-09-16 13:24 IST

ದೇರಳಕಟ್ಟೆ, ಸೆ.16: ಬೆಳ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಂಜಳ ನಿವಾಸಿ ಅಬ್ಬಾಸ್ ಎಂಬವರ ಪುತ್ರ ಎಚ್.ಮುಹಮ್ಮದ್ ಶಹದ್(12) ಅಲ್ಪಕಾಲದ ಅನಾರೋಗ್ಯದಿಂದ ಶನಿವಾರ ನಿಧನರಾದರು.

ದೇರಳಕಟ್ಟೆ ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿ ವಿದ್ಯಾರ್ಥಿಯಾಗಿದ್ದ ಈತ ಅಂಗವಿಕಲನಾಗಿದ್ದ. ವೀಲ್ ಚೇರ್ ಮೂಲಕ ಶಾಲೆಗೆ ಹಾಜರಾಗಿ ಶಿಕ್ಷಣ ಪಡೆಯುತ್ತಿದ್ದ ಶಹದ್ ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೀಡಾಗಿದ್ದ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ಶಹದ್ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾನೆ.

ಮೃತ ವಿದ್ಯಾರ್ಥಿ ತಂದೆ, ತಾಯಿ, ಇಬ್ಬರು ಸಹೋದರಿಯರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾನೆ.

ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್, ಲೆಕ್ಕಾಧಿಕಾರಿ ರವೂಫ್, ಅಂಬ್ಲಮೊಗರು ಪಿಡಿಒ ಅಬ್ದುಲ್ ಖಾದರ್ ದೇರಳಕಟ್ಟೆ, ದೇರಳಕಟ್ಟೆ ದ.ಕ. ಜಿಪಂ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಮೇಬಲ್ ಡಿಸೋಜ, ಶಿಕ್ಷಕರು, ಎಸ್ ಡಿಎಂಸಿ ಅಧ್ಯಕ್ಷ ಹನೀಫ್ ಬೆಳ್ಮ, ಉಪಾಧ್ಯಕ್ಷ ರಾಹಿಲ, ಸದಸ್ಯ ಸ್ವಾಲಿಹ್ ಬಿ,, ತಾಯಿರಾ, ಝುಬೈದಾ ಮತ್ತಿತರರು ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News