ಧರ್ಮಸ್ಥಳ ಪ್ರಕರಣ | ಮತ್ತೆ ವಿಚಾರಣೆಗೆ ಹಾಜರಾಗಲು ನಾಲ್ಕು ಮಂದಿಗೆ ಎಸ್.ಐ.ಟಿ ನೋಟಿಸ್
Update: 2025-10-30 13:40 IST
ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ನೋಟೀಸ್ ಗೆ ವಿಚಾರಣೆಗೆ ಹಾಜರಾಗದ ಹಿನ್ನಲೆಯಲ್ಲಿ ಮಹೇಶ್ ಶೆಟ್ಟಿ ತಮಿರೋಡಿ ಸೇರಿದಂತೆ ನಾಲ್ವರಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ಅಧಿಕಾರಿಗಳು ನಾಲ್ಕು ಮಂದಿಯ ಮನೆಗೆ ಹೋಗಿ ನೋಟೀಸ್ ಜಾರಿ ಮಾಡಿದೆ.
ಮಹೇಶ್ ಶೆಟ್ಟಿ ತಿಮರೋಡಿ ,ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ. ಗೆ ನ.3 ರಂದು ಬೆಳ್ತಂಗಡಿ ಎಸ್ಐಟಿ ಕಚೇರಿಗೆ ವಿಚಾರಣೆಗೆ ಹಾಜರಾಗಲು ಅ.30 ರಂದು ಮನೆಗೆ ಹೋಗಿ ನೋಟಿಸ್ ಅಂಟಿಸಿದ್ದಾರೆ.
ಇನ್ನೂ ಸೌಜನ್ಯ ಮಾವ ವಿಠಲ್ ಗೌಡ ಅವರಿಗೆ ಅ.31 ರಂದು ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಹಾಜರಾಗಲು ಅ.30 ರಂದು ನೋಟಿಸ್ ಮನೆಗೆ ಹೋಗಿ ಜಾರಿ ಮಾಡಿದ್ದಾರೆ.