×
Ad

ಧರ್ಮಸ್ಥಳ: ರಸ್ತೆಗಿಳಿದು ವಾಹನಗಳನ್ನು ಹಾನಿಗೊಳಿಸಿದ ಕಾಡಾನೆ

Update: 2024-08-15 15:00 IST

ಬೆಳ್ತಂಗಡಿ; ಧರ್ಮಸ್ಥಳ ಗ್ರಾಮದ ‌ಬೊಳಿಯಾರು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಇಳಿದ ಕಾಡಾನೆ ವಾಹನಗಳನ್ನು ಜಖಂಗೊಳಿಸಿದ ಘಟನೆ ಗುರುವಾರ ಬೆಳಗ್ಗೆ ಸಂಭವಿಸಿದೆ.

ಗುರುವಾರ ಬೆಳಗ್ಗೆ 7.40 ರ ಸುಮಾರಿಗೆ ಕಾಡನೆ ಬೊಳಿಯಾರು ಸಮೀಪ ಹೆದ್ದಾರಿಯಲ್ಲಿ ಕಾಣಿಸಿಕೊಂಡಿದೆ. ರಸ್ತೆ ದಾಟುತ್ತಿದ್ದ ಕಾಡಾನೆ ರಸ್ತೆಯಲ್ಲಿಯೇ ನಿಂತಿದ್ದು ಈ ಸಂದರ್ಭದಲ್ಲಿ ಹೆದ್ದಾರಿಯಲ್ಲಿ ಬಂದ ಕೆಎಸ್ಸಾರ್ಟಿಸಿ ಬಸ್ಸನ್ನು ಅಡ್ಡಗಟ್ಟಿದ ಕಾಡಾನೆ ಬಸ್ಸಿನ ಮು‌ಂಭಾಗಕ್ಕೆ ತಿವಿದಿದ್ದು ಬಸ್ಸಿನ ಮುಂಭಾಗ ಜಖಂಗೊಂಡಿದೆ.

ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ. ಇದೇ ವೇಳೆ ರಸ್ತೆಯಲ್ಲಿ ಬಂದ ದ್ವಿಚಕ್ರ ವಾಹನವನ್ನು ಬಿಟ್ಟು ಅದರ ಸವಾರ ಆನೆಯಿಂದ‌ ತಪ್ಪಿಸಿಕೊಂಡಿದ್ದು ವಾಹನವನ್ನು ಕಾಡಾನೆ ಹಾನಿಗೊಳಿಸಿದೆ.

 ಬೊಳಿಯಾರು ಹಾಗೂ ಮುಳಿಕಾರು ಪರಿಸರದಲ್ಲಿ ಎರಡು ದಿನಗಳಿಂದ ಕಾಡಾನೆಗಳ ಹಿಂಡು ತಿರುಗಾಡುತ್ತಿದ್ದು ಕೃಷಿಕರಿಗೆ ತೊಂದರೆಯುಂಟುಮಾಡುತ್ತಿದೆ.

ಇದೀಗ ಹೆದ್ದಾರಿಗೆ ಕಾಡಾನೆ ಇಳಿದಿರುವುದು ಜನರಲ್ಲಿ ಭಯ ಹೆಚ್ಚಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News