ಮಂಗಳೂರು ವಿವಿ ವಾಣಿಜ್ಯ ವಿಭಾಗದಲ್ಲಿ ಜಿಎಸ್‌ಟಿ ಕುರಿತ ಕಾರ್ಯಗಾರ
Update: 2025-12-13 17:01 IST
ಕೊಣಾಜೆ: ಮಂಗಳೂರು ವಿವಿಯ ವಾಣಿಜ್ಯ ವಿಭಾಗದ ಯೂನಿಯನ್ ಬ್ಯಾಂಕ್ ಚೇರ್ ವತಿಯಿಂದ ವಿದ್ಯಾರ್ಥಿಗಳಿಗೆ ಜಿಎಸ್ಟಿ ಕುರಿತು ಒಂದು ದಿನದ ಕಾರ್ಯಗಾರ ಇತ್ತೀಚೆಗೆ ನಡೆಯಿತು.
ಮಂಗಳೂರಿನ ನಿತಿನ್ ಜೆ. ಶೆಟ್ಟಿ ಅಂಡ್ ಕೋ. ಚಾರ್ಟೆಡ್ ಅಕೌಂಟ್ಡ್ ಕಂಪೆನಿಯ ಸಿಎ ಲಕ್ಷ್ಮಿ ವಿಶ್ವನಾಥ ಮತ್ತು ಸ್ಮಿತಾ ಪಿ. ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಿದರು. ಪ್ರಾಧ್ಯಾಪಕರಾದ ಪ್ರೊ.ಪರಮೇಶ್ವರ ಜಿಎಸ್‌ಟಿ ಪ್ರಾಯೋಗಿಕ ಅವಶ್ಯಕತೆಗಳ ಕುರಿತು ಮಾತನಾಡಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊ. ಪ್ರೀತಿ ಕೀರ್ತಿ ಡಿಸೋಜಾ ಅಧ್ಯಕ್ಷತೆ ವಹಿಸಿದ್ದರು.
ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಡಾ. ದಿನಕರ ಕೆಂಜೂರು, ಡಾ. ರಮ್ಯ ಕೆ.ಆರ್. ವೈಶಾಲಿ ಕೆ. ಮತ್ತು ಸಿ. ಲಹರಿ ಹಾಜರಿದ್ದರು.
ಮೋಕ್ಷಿತ ಎಂ. ತಂಡದವರು ಪ್ರಾರ್ಥಿಸಿದರು. ಪ್ರಿನ್ಸನ್ ಡಿಸೋಜಾ ಸ್ವಾಗತಿಸಿದರು. ದೀಕ್ಷಾ ಎನ್. ಭಟ್ ವಂದಿಸಿದರು. ಸಜೀಲಾ ಕೆ. ಕಾರ್ಯಕ್ರಮ ನಿರೂಪಿಸಿದರು.