×
Ad

ದ.ಕ. ಜಿಲ್ಲಾ ಮುಸ್ಲಿಂ ಕೋಆರ್ಡಿನೇಷನ್ ಸಮಿತಿ ಅಸ್ತಿತ್ವಕ್ಕೆ

Update: 2023-08-01 18:27 IST

ತಬೂಕ್ ದಾರಿಮಿ

ಮಂಗಳೂರು, ಆ.1: ದ.ಕ.ಜಿಲ್ಲೆಯ ವಿವಿಧ ಮುಸ್ಲಿಂ ಸಂಘಟನೆಗಳ ಪ್ರಮುಖರ ಸಭೆಯು ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್‌ ಅಧ್ಯಕ್ಷತೆಯಲ್ಲಿ ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆಯಿತು.

ಸಭೆಯಲ್ಲಿ ದ.ಕ. ಜಿಲ್ಲಾ ಮುಸ್ಲಿಂ ಕೋಆರ್ಡಿನೇಷನ್ ಸಮಿತಿಯನ್ನು ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಹಾಜಿ ತಬೂಕ್ ಅಬ್ದುಲ್ ರಹ್ಮಾನ್ ದಾರಿಮಿ, ಸದಸ್ಯರಾಗಿ ಸಿ. ಅಬ್ದುಲ್ ರಹ್ಮಾನ್, ನ್ಯಾಯವಾದಿ ಎಸ್. ಸುಲೈಮಾನ್, ಹಾಜಿ ಯು.ಕೆ ಯೂಸುಫ್ ಉಳ್ಳಾಲ, ಶಬೀರ್ ಅಬ್ಬಾಸ್ ತಲಪಾಡಿ, ರಿಯಾಝ್ ಹರೇಕಳ, ಹಾಜಿ ಉಸ್ಮಾನ್ ಪಾಣೆಮಂಗಳೂರು, ರವೂಫ್ ಮಂಗಳೂರು, ಸೆಯ್ಯದ್ ಪಿಕೆ ಬಂಗೇರುಕಟ್ಟೆ, ಕರೀಂ ಕಡಬ ಅವರನ್ನು ಆಯ್ಕೆ ಮಾಡಲಾಯಿತು.

ಹಾಜಿ ಅಹ್ಮದ್ ಬಾವ, ಹಾಜಿ ಉಸ್ಮಾನ್ ಪಾಣೆಮಂಗಳೂರು ಮತ್ತಿತರರು ಮಾತನಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News