×
Ad

ಯೆನೆಪೋಯ ವಿವಿಯಲ್ಲಿ ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆ

Update: 2026-03-09 22:26 IST

ಮಂಗಳೂರು,ಮಾ.9: ದೇರಳಕಟ್ಟೆಯ ಯೆನೆಪೊಯ ( ಪರಿಗಣಿತ) ವಿಶ್ವವಿದ್ಯಾನಿಲಯದಲ್ಲಿ ಜೆಂಡರ್ ಸೆನ್ಸಿಟೈಸೇಶನ್ ಸೆಲ್ (ಲಿಂಗ ಸಂವೇದನಾ ಘಟಕ) ವತಿಯಿಂದ ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸೋಮವಾರ ಯೆಂಡ್ಯೂರನ್ಸ್ ಸಭಾಂಗಣದಲ್ಲಿ ಆಚರಿಸಲಾಯಿತು.

ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಕೆ. ಎಸ್. ಗಂಗಾಧರ ಸೋಮಯಾಜಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.

ಮಹಿಳೆಯರ ಸಬಲೀಕರಣ, ಸಮಾಜದಲ್ಲಿ ಮಹಿಳೆಯರ ಪಾತ್ರ ಹಾಗೂ ಪರಸ್ಪರ ಸಹಕಾರದ ಮಹತ್ವದ ಕುರಿತು ಮಾತನಾಡಿದರು. ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯೆ ಕಾರ್ಯದರ್ಶಿ ಜೈಬುನ್ನಿಸಾ ಅವರು ಮಹಿಳೆಯರ ಹಕ್ಕುಗಳು ಮತ್ತು ಕಾನೂನು ರಕ್ಷಣೆ ಕುರಿತು ವಿವರಿಸಿದರು.

ಯೆನೆಪೋಯ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರು ಹಾಗೂ ಜೆಂಡರ್ ಸೆನ್ಸಿಟೈಸೇಶನ್ ಸೆಲ್ (ಲಿಂಗ ಸಂವೇದನಾ ಘಟಕ) ಸಂಯೋಜಕಿಯಾದ ಡಾ. ಲೀನಾ ಕೆ. ಸಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಘಟಕದ ಕಾರ್ಯದರ್ಶಿಯಾದ ಡಾ. ಗ್ಲಾಡಿಸ್ ಕೊಲಾಸೋ ಕಾರ್ಯಕ್ರಮದಲ್ಲಿಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಹಿಮಾ, ಸ್ವಾಗತಿಸಿ, ಫಾತಿಮಾ ವಂದಿಸಿದರು. ಈ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯದ ಸಿಬ್ಬಂದಿ ಮಮತಾ ಜೆ ಶೆಟ್ಟಿ ಉತ್ತಮ ಉದ್ಯೋಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸುಮಾರು 300 ಮಂದಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. 




Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News