ಉಬಾರ್ ಸ್ಪೋರ್ಟಿಂಗ್ ಕ್ಲಬ್ ವತಿಯಿಂದ ಇಫ್ತಾರ್ ಕೂಟ
ಉಪ್ಪಿನಂಗಡಿ: ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಬಾರ್ ಸ್ಪೋರ್ಟಿಂಗ್ ಕ್ಲಬ್ ಹಾಗೂ ಇದರ ಅಂಗ ಸಂಸ್ಥೆಯಾದ ಉಬಾರ್ ಡೋನಾರ್ಸ್‍ನ ವತಿಯಿಂದ ಉಪ್ಪಿನಂಗಡಿಯ ಎಚ್.ಎಂ. ಅಡಿಟೋರಿಯಂನಲ್ಲಿ ಬೃಹತ್ ಇಫ್ತಾರ್ ಕೂಟ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಹಿರಿಯ ವೈದ್ಯ ಡಾ. ಎಂ.ಆರ್. ಶೆಣೈ, ಉಪ್ಪಿನಂಗಡಿಯಲ್ಲಿ ಎಲ್ಲಾ ಜಾತಿ- ಧರ್ಮದವರು ಒಳ್ಳೆಯ ಬಾಂಧವ್ಯದಿಂದ ಇದ್ದೇವೆ. ಆದ್ದರಿಂದ ಇಲ್ಲಿ ಕೋಮು ಸೌಹಾರ್ದತೆಗೆ ಯಾವತ್ತೂ ಧಕ್ಕೆಯಾಗಿಲ್ಲ. ಇಫ್ತಾರ್ ಕೂಟದಂತಹ ಕಾರ್ಯಕ್ರಮಗಳಿಂದ ಈ ಸೌಹಾರ್ದತೆ ಇನ್ನಷ್ಟು ಮುಂದುವರಿಯಲಿ ಎಂದರು.
ವೈದ್ಯ ಡಾ. ನಿರಂಜನ್ ರೈ ಮಾತನಾಡಿ, ಸಮಾಜದಲ್ಲಿರುವ ಸೌಹಾರ್ದತೆಯ ಒಗ್ಗಟ್ಟು ತೋರಿಸಲು ಇಫ್ತಾರ್ ಕೂಟ ಪ್ರೇರಣೆಯಾಗಲಿ. ಹೊಸ ತಲೆಮಾರಿನ ಯುವಕರಿಗೆ ಈ ಕಾರ್ಯಕ್ರಮ ಮಾದರಿಯಾಗಲಿ ಎಂದರು.
ನಿವೃತ್ತ ಶಿಕ್ಷಕ ವಿನ್ಸೆಂಟ್ ಫೆರ್ನಾಂಡಿಸ್ ಮಾತನಾಡಿ, ಮುಸ್ಲಿಂ ಸಮುದಯಕ್ಕೆ ಈ ತಿಂಗಳು ಪುಣ್ಯ ಸಂಗ್ರಹಿಸುವ ಕಾಲ. ಯುವಕರ ಈ ಕಾರ್ಯಕ್ರಮದ ಮೂಲಕ ಇಲ್ಲಿನ ಸೌಹಾರ್ದತೆಯ ಕಿಚ್ಚು ಎಲ್ಲೆಡೆ ಹರಡಲಿ ಎಂದರು.
ಉಮ್ರಾ ಯಾತ್ರೆ ಕೈಗೊಂಡಿರುವ ಉದ್ಯಮಿ ಸಿದ್ದೀಕ್ ಕೆಂಪಿಯವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.
ಸಮದ್ ಅನ್ಸಾರಿ ದುವಾಶೀರ್ವಚನ ನೀಡಿದರು. ದಂತ ವೈದ್ಯ ಡಾ. ರಾಜಾರಾಮ್ ಕೆ.ಬಿ. ಮಾತನಾಡಿದರು. ಕಾರ್ಯಕ್ರಮದಲ್ಲಿ ಉಬಾರ್ ಸ್ಪೋರ್ಟಿಂಗ್ ಕ್ಲಬ್‍ನ ಅಧ್ಯಕ್ಷ ಶಬೀರ್ ಕೆಂಪಿ, ಗೌರವ ಸಲಹೆಗಾರ ಯು.ಟಿ. ತೌಸೀಫ್, ಗೌರವಾಧ್ಯಕ್ಷ ರಫೀಕ್ ಮಾಸ್ಟರ್, ಉಪ್ಪಿನಂಗಡಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ತ, ಪ್ರಮುಖರಾದ ಶುಕೂರ್ ಹಾಜಿ ಶುಕ್ರಿಯಾ, ಮಹಮ್ಮದ್ ಹಾಜಿ ನೆಕ್ಕಿಲಾಡಿ, ಅಝೀಝ್ ಬಸ್ತಿಕ್ಕಾರ್, ಝಕರಿಯಾ ಕೊಡಿಪ್ಪಾಡಿ, ಮುಸ್ತಫಾ ಲತೀಫೀ, ನಝೀರ್ ಮಠ, ಅಬೂಬಕ್ಕರ್ ಪುತ್ತು, ಶುಕೂರ್ ಮೇದರಬೆಟ್ಟು, ಇಬ್ರಾಹಿಂ ದುಬಾಲ್, ಅಯ್ಯೂಬ್ ದೇಂತಾರ್, ಹಮೀದ್ ಕರಾವಳಿ, ರಹಿಮಾನ್ ಮಠ, ಮಹಮ್ಮದ್ ಕೆಂಪಿ, ಹನೀಫ್ ಕಡವಿನಬಾಗಿಲು, ದಾವೂದ್ ಚಾಯ್ ಡೇಸ್, ಶುಕೂರ್ ನೆಕ್ಕಿಲ್, ಶಫೀಕ್ ಅರಫಾ, ಇಸ್ಮಾಯಿಲ್ ತಂಙಳ್, ಶುಕೂರ್ ಮೇದರಬೆಟ್ಟು, ಈಸುಬು ಪೆದಮಲೆ, ಸಿದ್ದಿಕ್ ಮೇದರಬೆಟ್ಟು, ಮೋನು ಪಿಲಿಗೂಡು, ಬಶೀರ್ ಪೆರಿಯಡ್ಕ, ಇಬ್ರಾಹೀಂ ಆಚೀ ಕೆಂಪಿ, ಅಫ್ತಾಬ್ ಬಸ್ತಿಕ್ಕಾರ್, ನವಾಝ್ ಉಬಾರ್, ನವಾಝ್ ಎಲೈಟ್, ಶಾನಿಲ್ ಬಸ್ತಿಕ್ಕಾರ್, ಸಾದಿಕ್ ಅಗ್ನಾಡಿ, ಮಕ್ದೂಮ್ ರಾಝೀ, ಶೌಕತ್ ಬಸ್ತಿಕ್ಕಾರ್, ಇಕ್ಬಾಲ್ ಸಿಪಿಸಿ, ಹೌಷಾ ಕೆಂಪಿ, ಶಿಬ್ಲಿ ಶುಕ್ರಿಯಾ, ಅನಸ್ ದಿಲ್ದಾರ್, ರಾಝೀಕ್, ಅನೀಸ್ ಗಾಂಧಿಪಾರ್ಕ್, ಮುಝಾಫರ್, ಮನ್ಸೂರ್, ಶೌಕತ್ ಬಸ್ತಿಕ್ಕಾರ್, ರವೂಫ್, ಇಬ್ರಾಹಿಂ ಸಿಟಿ, ನಝೀರ್ ಹೊಸಮೊಗ್ರು, ಇಸಾಕ್ ಸಿಟಿ, ಸಾದಿಕ್ ಗಾಂಧಿ ಪಾರ್ಕ್, ವೆಂಕಟೇಶ್ ಕುಟ್ಟಿ, ಕೇಶವ ಲಕ್ಷ್ಮೀ ನಗರ, ಖಾದರ್ ಆದರ್ಶನಗರ, ಸಿಯಾಕ್ ಕೆಂಪಿ, ಶುಕೂರ್ ಕೆಂಪಿ, ಮೊಯಿನ್ ನೆಟ್ಟಿಬೈಲ್, ಸಿಯಾಬ್ ತಂಙಳ್, ಹಸನ್ ಶುಕ್ರಿಯಾ, ಫೌಝರ್ ಯು.ಟಿ., ಮುನೀರ್ ಎನ್ಮಾಡಿ, ರಿಯಾಝ್ ಕರಾಯ ಹಾಜರಿದ್ದರು. ಇರ್ಷಾದ್ ಯುಟಿ. ಕಾರ್ಯಕ್ರಮ ನಿರೂಪಿಸಿದರು.