×
Ad

DYFI ಮೊಂಟೆಪದವು ಘಟಕದಿಂದ ಸೌಹಾರ್ದ ಯುವ ಸಮ್ಮಿಲನ

Update: 2025-07-03 23:50 IST

ಮಂಗಳೂರು: DYFI ಮೊಂಟೆಪದವು ಘಟಕದಿಂದ ಕೋಮುವಾದದ ವಿರುದ್ಧ ಸೌಹಾರ್ದ ಯುವ ಸಮ್ಮಿಲನ ಕಾರ್ಯಕ್ರಮ ಮೊಂಟೆಪದವಿನಲ್ಲಿ ಬುಧವಾರ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ DYFI ಮಾಜಿ ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳ ಕೋಮುವಾದದ ಅಪಾಯದ ಕುರಿತು ಪ್ರಸ್ತಾಪಿಸಿ, ಕೋಮುವಾದದವನ್ನು ಎದುರಿಸಲು ಯುವಜನರು ಒಂದಾಗಬೇಕಾದ ಅಗತ್ಯವಿದೆ ಎಂದು ಹೇಳಿದರು.

ಮುಂದುವರೆಸಿ ಮಾತನಾಡಿ ಬಾಸ್ಕರ್ ಕುಂಬ್ಳೆ ನಂತರ ಶ್ರೀನಿವಾಸ್ ಬಜಾಲ್ ರವರ ಕೊಲೆ ಮಾಡಿದರು. ಕೋಮುವಾದಿಗಳು ಕೇವಲ ಮುಸ್ಲಿಂಮರ ವಿರುದ್ಧ ಮಾತ್ರ ಅಲ್ಲ ಜನಪರವಾಗಿ ಮಾತನಾಡುವ ಹಿಂದೂ ಯುವಕರನ್ನು ಕೂಡ ಕೊಲೆ ಮಾಡಿದ್ದಾರೆ ಎಂದು ತಿಳಿಸಿದರು.

DYFI ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಕೋಮುವಾದಿಗಳು ಒಂದು ಮತ್ತೊಂದು ಧರ್ಮವನ್ನು ಎತ್ತಿಕಟ್ಟುವ ಕೆಲಸಗಳನ್ನು ಮಾಡುತ್ತಲೇ ಬಂದಿ ದ್ದಾರೆ. ಈ ಸಂದರ್ಭ ನಮ್ಮಂತಹ ಸೌಹಾರ್ದ ಬಯಸುವ ಮನಸ್ಸುಗಳು ಅವರ ಷಡ್ಯಂತ್ರ ವಿಫಲಗೊಳಿ ಸಬೇಕು. ಹೆಚ್ಚು ಹೆಚ್ಚು ಜನಬಾಧಿತ ನಿರುದ್ಯೋಗ, ಶಿಕ್ಷಣದ ಖಾಸಗೀಕರಣ, ಆರೋಗ್ಯದ ವ್ಯಾಪಾರಿ ಕರಣ, ಅತ್ಯಾಚಾರ ಇಂತಹ ವಿಚಾರಗಳನ್ನು ಮುನ್ನಲೆಗೆ ತರುವ ಅವುಗಳ ವಿರುಧ್ದ ಐಕ್ಯತೆಯಿಂದ ಹೋರಾಡುವ ಮನೋಭಾವನೆಗಳನ್ನು ಬೆಳಸಬೇಕು ಎಂದರು.

ಇದೇ ಸಂದರ್ಭ ಮಾತನಾಡಿದ ಸಾಮಾಜಿಕ ಹೋರಾಟಗಾರಾದ ಅಬ್ದುಲ್ ಅಝೀಝ್ ಮೊಂಟೆಪದವು ಜಾತ್ಯತೀತ ಭಾವನೆ ಮತ್ತು ಅರ್ಥಪೂರ್ಣವಾದ ನ್ಯಾಯಾಕ್ಕಾಗಿ ಹೋರಾಡುವ ಪ್ರತಿಭಟನೆಗಳು DYFI ನಲ್ಲಿ ಮಾತ್ರ ಕಂಡಿದ್ದೇವೆ ಎಂದು ಸಂಘಟನೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ DYFI ಉಳ್ಳಾಲ ವಲಯ ಅಧ್ಯಕ್ಷರಾದ ನಿತಿನ್ ಕುತ್ತಾರ್ ಮಾತನಾಡಿ ದರು ಮತ್ತೆ ಜನರ ಮನಸ್ಸನ್ನು ಬೆಸೆಯುವ ಕೆಲಸ ಮಾಡುವ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ಘಟಕ ಅಧ್ಯಕ್ಷರಾದ ಶೆರೀಫ್ ಕೆ.ಎ. ಮೊಂಟೆಪದವು ವಹಿಸಿದರು. ವೇದಿಕೆಯಲ್ಲಿ ವಲಯ ಕಾರ್ಯದರ್ಶಿ ರಿಝ್ವಾನ್ ಹರೇಕಳ, ಸಾಮಾಜಿಕ ಚಿಂತಕರಾದ ಅಸ್ಬಾಕ್ ತೋಟಲ್, ಇಸ್ಮಾಯಿಲ್ ಮೊಂಟೆಪದವು, ಹಿರಿಯ ಸಿಪಿಐ(ಎಂ) ನಾಯಕರು, DYFI ಮೊಂಟೆಪದವು ಕಾರ್ಯದರ್ಶಿ ಶಾಫಿ ಚಾಂದ್, ಪಿ.ಎಚ್. ಮೊಹಿದ್ದಿನ್ ಕುಂಞಿ, ಅಬ್ದುಲ್ ಲತೀಫ್, DYFI ಮಾಜಿ ಜಿಲ್ಲಾ ಮುಖಂಡರಾದ ರಫೀಕ್ ಹರೇಕಳ, DYFI ಮುಖಂಡರಾದ ರಝಾಕ್ ಮುಡಿಪು, , ಸಿರಾಜ್ ಬಿ.ಎಂ. ಲತೀಫ್ ಉಪಸ್ಥಿತರಿ ದ್ದರು. ರಝಾಕ್ ಮೊಂಟೆಪದವು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.









Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News