×
Ad

ಈಸ್ಟರ್, ಗುಡ್ ಫ್ರೈಡೇ : ಕ್ರೈಸ್ತ ಸಮುದಾಯದ ಶಿಕ್ಷಕರಿಗೆ ಎಸ್‌ಎಸ್‌ಎಲ್‌ಸಿ ಮೌಲ್ಯ ಮಾಪನ ಕರ್ತವ್ಯಕ್ಕೆ ವಿನಾಯಿತಿ

Update: 2025-04-17 21:37 IST

ಯುಟಿ ಖಾದರ್

ಮಂಗಳೂರು, ಎ.17: ಕ್ರಿಶ್ಚಿಯನ್ ಸಮುದಾಯದ ಶಿಕ್ಷಕ, ಶಿಕ್ಷಕಿಯರಿಗೆ ಈಸ್ಟರ್ ಗುಡ್ ಫ್ರೈಡೇ ದಿನಗಳಲ್ಲಿ ಎಸ್‌ಎಸ್‌ಎಲ್‌ಸಿ ಮೌಲ್ಯ ಮಾಪನ ಕರ್ತವ್ಯಕ್ಕೆ ಶಿಕ್ಷಣ ಇಲಾಖೆಯು ವಿನಾಯಿತಿ ನೀಡಿದೆ.

ಈಸ್ಟರ್, ಗುಡ್ ಫ್ರೈಡೇ ದಿನ ಕ್ರೈಸ್ತ ಸಮುದಾಯದ ಶಿಕ್ಷಕ, ಶಿಕ್ಷಕಿಯರಿಗೆ ಎಸ್‌ಎಸ್‌ಎಲ್‌ಸಿ ಮೌಲ್ಯ ಮಾಪನದ ಕರ್ತವ್ಯಕ್ಕೆ ವಿನಾಯತಿ ನೀಡುವಂತೆ ವಿಧಾನ ಸಭಾ ಸ್ಪೀಕರ್ ಯು.ಟಿ. ಖಾದರ್ ಶಿಕ್ಷಣ ಇಲಾಖೆಗೆ ಸೂಚಿಸಿದ್ದರು.

ಪವಿತ್ರ ಈಸ್ಟರ್, ಗುಡ್ ಫ್ರೈಡೇ ದಿನಗಳಲ್ಲಿ ತಮಗೆ ಎಸ್ ಎಸ್ ಎಲ್ ಸಿ ಮೌಲ್ಯ ಮಾಪನದ ಕರ್ತವ್ಯಕ್ಕೆ ವಿನಾಯತಿ ನೀಡುವಂತೆ ಕ್ರಿಶ್ಚಿಯನ್ ಸಮುದಾಯದ ಶಿಕ್ಷಕ, ಶಿಕ್ಷಕಿಯರು ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಮನವಿ ಮಾಡಿದ್ದರು.

ಈ ಬಗ್ಗೆ ಶಿಕ್ಷಣ ಇಲಾಖೆಯ ಮಂತ್ರಿಗಳು ಹಾಗೂ ಮುಖ್ಯ ಕಾರ್ಯದರ್ಶಿಗಳ ಜೊತೆ ಮಾತುಕತೆ ನಡೆಸಿದ ಸಭಾಧ್ಯಕ್ಷ ಯು ಟಿ ಖಾದರ್ ಈಸ್ಟರ್ ಗುಡ್ ಫ್ರೈಡೇ ದಿನಗಳಾದ ಗುರುವಾರ, ಶುಕ್ರವಾರ ಹಾಗೂ ರವಿವಾರ ಕರ್ತವ್ಯಕ್ಕೆ ವಿನಾಯಿತಿ ನೀಡುವಂತೆ ಸೂಚನೆ ನೀಡಿದ್ದರು.

ಅದರಂತೆ ಶಿಕ್ಷಣ ಇಲಾಖೆಯು ಕ್ರಿಶ್ಚಿಯನ್ ಸಮುದಾಯದ ಶಿಕ್ಷಕ, ಶಿಕ್ಷಕಿಯರಿಗೆ ಈಸ್ಟರ್, ಗುಡ್ ಫ್ರೈಡೇ ದಿನಗಳಲ್ಲಿ ವಿನಾಯಿತಿ ನೀಡಿ ಉಳಿದ ದಿನಗಳಲ್ಲಿ ಹಾಜರಾಗಲು ಅನುಮತಿ ನೀಡಲಾಗಿದೆ ಎಂದು ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News