×
Ad

ರೊಸಾರಿಯೊ ಕ್ಯಾಥೆಡ್ರಲ್‌ನಲ್ಲಿ ಎಕ್ಯುಮೆನಿಕಲ್ ಕನ್ನಡ ಪ್ರಾರ್ಥನಾ ಸೇವೆ

Update: 2026-01-24 17:11 IST

ಮಂಗಳೂರು: ಬೋಳಾರದ ರೊಸಾರಿಯೊ ಕ್ಯಾಥೆಡ್ರಲ್, ಜೆಪ್ಪುವಿನ ಸಿಎಸ್‌ಐ ಕಾಂತಿ ಚರ್ಚ್ ಹಾಗೂ ಮಂಗಳೂರಿನ ಸಿಎಸ್‌ಐ ಸೇಂಟ್ ಪೌಲ್ಸ್ ಚರ್ಚ್ ಜಂಟಿಯಾಗಿ ರೊಸಾರಿಯೊ ಕ್ಯಾಥೆಡ್ರಲ್‌ನಲ್ಲಿ ಎಕ್ಯುಮೆನಿಕಲ್ ಕನ್ನಡ ಪ್ರಾರ್ಥನಾ ಸೇವೆಯನ್ನು ಆಯೋಜಿಸಿತು.

ರೊಜಾರಿಯೊ ಕ್ಯಾಥೆಡ್ರಲ್ ನ ಧರ್ಮಗುರುಗಳಾದ ಫಾ. ವಲೇರಿಯನ್ ಡಿಸೋಜಾ ಸಭೆಯನ್ನು ಸ್ವಾಗತಿಸಿ, ಜೆಪ್ಪುವಿನ ಸಿಎಸ್‌ಐ ಕಾಂತಿ ಚರ್ಚ್‌ನ ಪಾಸ್ಟರ್ ಗೇಬ್ರಿಯಲ್ ರೋನಿತ್, ಸಿಎಸ್‌ಐ ಸೇಂಟ್ ಪೌಲ್ಸ್ ಚರ್ಚ್‌ನ ವಂ| ಬಿನು ಸಿ. ಜಾನ್ ಹಾಗೂ ರೊಸಾರಿಯೊ ಕ್ಯಾಥೆಡ್ರಲ್‌ನ ಫಾ. ವಲೇರಿಯನ್ ಫೆರ್ನಾಂಡಿಸ್ ಅವರೊಂದಿಗೆ ಪ್ರಾರ್ಥನಾ ಸೇವೆಯನ್ನು ನಡೆಸಿಕೊಟ್ಟರು.

ಕ್ರಿಶ್ಚಿಯನ್ ಸಮುದಾಯಗಳ ನಡುವಿನ ಏಕತೆ ಮತ್ತು ಸಾಮರಸ್ಯವನ್ನು ಸಂಕೇತಿಸುವ ದೀಪ ಬೆಳಗಿಸುವುದರೊಂದಿಗೆ ಪ್ರಾರ್ಥನಾ ಸೇವೆಗೆ ಉದ್ಘಾಟನೆ ನೀಡಲಾಯಿತು.

ರೊಸಾರಿಯೊ ಕ್ಯಾಥೆಡ್ರಲ್ ಚರ್ಚ್ ನ ಪಾಲನಾ ಮಂಡಳಿಯ ಉಪಾಧ್ಯಕ್ಷ ಸಿರಿಲ್ ರೊಸಾರಿಯೊ, ಕಾರ್ಯದರ್ಶಿ ಐಡಾ ಫುರ್ಟಾಡೊ, 21 ಆಯೋಗಗಳ ಸಂಯೋಜಕ ಆಲ್ಡ್ರಿನ್ ವಾಜ್, ಎಕ್ಯುಮೆನಿಸಂ ಆಯೋಗದ ಸಂಚಾಲಕಿ ಮೇರಿ ಎ. ಡಿಸೋಜಾ ಸೇರಿದಂತೆ ಬೋಳಾರದ ರೊಸಾರಿಯೊ ಕ್ಯಾಥೆಡ್ರಲ್, ಜೆಪ್ಪುವಿನ ಸಿಎಸ್‌ಐ ಕಾಂತಿ ಚರ್ಚ್ ಮತ್ತು ಮಂಗಳೂರಿನ ಸಿಎಸ್‌ಐ ಸೇಂಟ್ ಪೌಲ್ಸ್ ಚರ್ಚ್‌ನ ಪಾಲನಾ ಮಂಡಳಿಯ ಸದಸ್ಯರು ಪ್ರಾರ್ಥನಾ ಸೇವೆಯಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News