ರೆಂಜಾಡಿ| ಸೇತುವೆ ನಿರ್ಮಾಣಕ್ಕೆ ಯು.ಟಿ.ಖಾದರ್ ಶಿಲಾನ್ಯಾಸ
ಕೊಣಾಜೆ: ಬೆಳ್ಮ ಗ್ರಾಮದ ರೆಂಜಾಡಿಯಲ್ಲಿರುವ ಸೇತುವೆ ಗ್ರಾಮದ ಪ್ರಮುಖ ಸಂಪರ್ಕ ಸೇತುವೆಯಾಗಿದೆ. ತಂದೆ ಯು.ಟಿ. ಫರೀದ್ ಅವರು ಶಾಸಕರಾಗಿದ್ದಾಗ ಇಲ್ಲಿ ಸೇತುವೆ ನಿರ್ಮಿಸಿ ದ್ವೀಪದಂತಹ ಈ ಪ್ರದೇಶಕ್ಕೆ ಸಂಪರ್ಕ ಕಲ್ಪಿಸಿದ್ದರು.
ಇದೀಗ 50 ವರ್ಷದ ಶಿಥಿಲಾವಸ್ಥೆಯಲ್ಲಿದ್ದ ಈ ಸೇತುವೆಯನ್ನು ಪುನರ್ ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಬೇಡಿಕೆ ಇಟ್ಟಿದ್ದು ಶಿಲಾನ್ಯಾಸವೂ ನಡೆದಿದೆ. ಆದಷ್ಡು ಶೀಘ್ರದಲ್ಲಿ ಸುಸಜ್ಜಿತ ಸೇತುವೆ ಮುಂದಿನ ಭವಿಷ್ಯಕ್ಕೆ ಪೂರಕ ವಾಗಿ ನಿರ್ಮಾಣವಾಗಲಿ ಎಂದು ವಿಧಾನಸಭಾ ಅಧ್ಯಕ್ಷರಾದ ಯು.ಟಿ.ಖಾದರ್ ಅವರು ಹೇಳಿದರು.
ಅವರು ಬೆಳ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯ ರೆಂಜಾಡಿ ಎಂಬಲ್ಲಿ ಒಂದು ಕೋಟಿ ಐವತ್ತು ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಯಾವುದೇ ಅಭಿವೃದ್ಧಿ ಕಾಮಗಾರಿಗೆ ಗ್ರಾಮಸ್ಥರ ಸಹಕಾರ ಇದ್ದರೆ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದರು.
ಮಸೀದಿಯ ಖತೀಬರಾದ ತಾಜುದ್ದೀನ್ ರಝಾ ಅಮ್ಜದಿ ಅವರು ದುವಾ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮೂಡಾ ಅಧ್ಯಕ್ಷರಾದ ಸದಾಶಿವ ಉಳ್ಳಾಲ್, ಬೆಳ್ಮ ಗ್ರಾಮಪಂಚಾಯತ್ ಉಪಾಧ್ಯಕ್ಷರಾದ ಹೇಮಾವತಿ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಮತಾ ಡಿ.ಎಸ್ ಗಟ್ಟಿ , ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್ ಶೆಟ್ಡಿ ಬೋಳಿಯಾರ್, ಮಾಜಿ ಅಧ್ಯಕ್ಷ ಯೂಸೂಫ್, ಬೆಳ್ಮ ಪಂಚಾಯತ್ ನ ಸದಸ್ಯರಾದ ಸತ್ತಾರ್, ಯೂಸೂಪ್ , ಇಬ್ರಾಹಿಂ, ಹನೀಫ್, ಇಕ್ಭಾಲ್, ರಝಾಕ್ , ಕೋರ್ದಬ್ಬು ದೇವಸ್ಥಾನದ ಗುರಿಕಾರರು ನಾಗಪ್ಪ ,ಮುಖಂಡರಾದ ಎನ್ ಎಸ್ ನಾಸೀರ್ ನಡುಪದವು , ಹಸನ್ ಕಾನಕೆರೆ , ರವಿರಾಜ್ , ಕಬೀರ್, ರೆಂಜಾಡಿ ಮಸೀದಿಯ ಅಧ್ಯಕ್ಷರಾದ ಹನೀಫ್ , ಗುತ್ತಿಗೆದಾರ ಮಹಮ್ಮದ್ ಸರ್ಫ್ರಾಝ್ ಶಾಲಿಮಾರ್ ಮೊದಲಾದವರು ಉಪಸ್ಥಿತರಿದ್ದರು.