ಕಲ್ಲಡ್ಕ: ಅನುಗ್ರಹ ಮಹಿಳಾ ಕಾಲೇಜಿಲ್ಲಿ NEET/CET ಕ್ರ್ಯಾಶ್ ಕೋರ್ಸ್ ಕುರಿತು ಮಾಹಿತಿ ಕಾರ್ಯಾಗಾರ
ಬಂಟ್ವಾಳ: MEIF ಹಾಗೂ ಯೆನೆಪೋಯ ಕಾಲೇಜಿನ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾದ ಉಚಿತ NEET/CET ಕ್ರ್ಯಾಶ್ ಕೋರ್ಸ್‌ಗಳ ಕುರಿತು ಮಾಹಿತಿ ಉಪನ್ಯಾಸ ಕಾರ್ಯಕ್ರಮ ಕಲ್ಲಡ್ಕದ ಅನುಗ್ರಹ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ನಡೆಯಿತು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಯೆನೆಪೋಯ ಪದವಿ ಪೂರ್ವ ಕಾಲೇಜಿನ ಮುಖ್ಯಸ್ಥರು ಹಾಗೂ ನಿರ್ದೇಶಕರು, YCAL Bahrain (Yenepoya Center for Advanced Learning) ಸಂಸ್ಥೆಯ ಸಿನಾನ್ ಝಕರಿಯ ಅವರು ಆಗಮಿಸಿದ್ದರು. ಅವರು ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಿಗೆ NEET/CET ಪರೀಕ್ಷೆಗಳ ಕುರಿತು ಸಮಗ್ರ ಮಾಹಿತಿಯನ್ನು ನೀಡಿದರು. ಜೊತೆಗೆ MEIF ಹಾಗೂ ಯೆನೆಪೋಯ ಕಾಲೇಜಿನ ಸಹಭಾಗಿತ್ವದಲ್ಲಿ ನಡೆಯುವ ಉಚಿತ NEET/CET ಕ್ರ್ಯಾಶ್ ಕೋರ್ಸ್ ಮತ್ತು ಅದರ ಉಚಿತ ಸೀಟ್ ಹಂಚಿಕೆ ಕುರಿತು ವಿವರಿಸಿದರು.
ಈ ಮಾಹಿತಿ ಮತ್ತು ವಿವರಣಾತ್ಮಕ ಕಾರ್ಯಕ್ರಮವು ಕಾಲೇಜಿನ ವಿದ್ಯಾರ್ಥಿನಿಯರಿಗೆ ಬಹಳ ಉಪಯುಕ್ತವಾಗಿದ್ದು, NEET/CET ಕೋರ್ಸ್‌ಗಳಿಗೆ ಸಂಬಂಧಿಸಿದ ತಮ್ಮ ಗೊಂದಲಗಳನ್ನು ಚರ್ಚಿಸಿ ಸ್ಪಷ್ಟ ಪರಿಹಾರವನ್ನು ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಅನುಗ್ರಹ ಮಹಿಳಾ ಕಾಲೇಜಿನ ಖಜಾಂಜಿ ಹೈದರ್ ಅಲಿ, ಕಾಲೇಜಿನ ಪ್ರಾಂಶುಪಾಲೆ ಡಾ. ಹೇಮಲತಾ ಬಿ. ಡಿ., ಹಾಗೂ ಬೋಧಕ ಮತ್ತು ಬೋಧಕೇತರ ವೃಂದದವರು ಉಪಸ್ಥಿತರಿದ್ದರು.
ಪ್ರಥಮ ಪಿಯುಸಿ PCMB ವಿದ್ಯಾರ್ಥಿನಿ ನುಹಾ ಮರ್ಯಮ್ ಕಿರಾಅತ್ ಪಠಿಸಿದರು. ವಿಜ್ಞಾನ ವಿಭಾಗದ ಉಪನ್ಯಾಸಕಿ ಕವಿತಾ ಕುಮಾರಿ ಕೆ. ಅವರು ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.