ಬೆಳ್ತಂಗಡಿ: ವಾಹನದ ಅಡಿಗೆ ಸಿಲುಕಿ ವೃದ್ದ ಮೃತ್ಯು
Update: 2025-11-20 23:18 IST
ಬೆಳ್ತಂಗಡಿ: ಮದ್ದಡ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಕಾಮಗಾರಿಯ ವಾಹನದ ಅಡಿಗೆ ಸಿಲುಕಿ ವೃದ್ದರೊಬ್ಬರು ಮೃತಪಟ್ಟ ಘಟನೆ ಗುರುವಾರ ಸಂಭವಿಸಿದೆ.
ಮೃತ ವ್ಯಕ್ತಿ ಬಂಗಾಡಿ ನಿವಾಸಿಯಾಗಿರುವುದಾಗಿ ತಿಳಿದು ಬಂದಿದೆ.
ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ರಸ್ತೆ ಕಾಮಗಾರಿಯ ಯಂತ್ರವೊಂದು ಚಲಾಯಿಸುತ್ತಾ ಬಂದ ಚಾಲಕ ವೃದ್ದನನ್ನು ಗಮನಿಸದೆ ವಾಹನ ಚಲಾಯಿಸಿದ್ದು ವೃದ್ದ ವಾಹನದ ಅಡಿಗೆ ಸಿಲುಕಿಕೊಂಡು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.