ಮಂಗಳೂರು: ಬಾಡಿಗೆ ಮಾಡುತ್ತಿದ್ದ ಖಾಸಗಿ ಕಾರುಗಳನ್ನು ತಡೆಹಿಡಿದ ಅಸೋಶಿಯೇಶನ್
ಸಾಂದರ್ಭಿಕ ಚಿತ್ರ (credit: AI)
ಮಂಗಳೂರು: ಬಾಡಿಗೆ ಮಾಡುತ್ತಿದ್ದ ಎರಡು ಖಾಸಗಿ ಕಾರುಗಳನ್ನು ಸೋಮವಾರ ಕಂಕನಾಡಿ ರೈಲ್ವೆ ನಿಲ್ದಾಣದಲ್ಲಿ ಪತ್ತೆ ಮಾಡಿದ ದ.ಕ. ಟ್ಯಾಕ್ಸಿಮೆನ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್ ಪದಾಧಿಕಾರಿಗಳು ಪೊಲೀಸರ ಮೂಲಕ ಆರ್‌ಟಿಒ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.
ರೂಮ್ ಕಾರ್ ಆನ್‌ಲೈನ್ ಮುಖಾಂತರ ಬೆಂಗಳೂರಿನಿಂದ ಬುಕಿಂಗ್ ಆಗಿ ಪ್ರವಾಸಿಗರನ್ನು ಕಂಕನಾಡಿ ರೈಲ್ವೆ ಸ್ಟೇಷನ್‌ನಿಂದ ಪಿಕಪ್ ಮಾಡಲು ಎರಡು ಕಾರುಗಳು ಬಂದಿತ್ತು. ಈ ಬಗ್ಗೆ ಮಾಹಿತಿ ಪಡೆದ ಸಂಘದ ಸದಸ್ಯರು ವಿಚಾರಣೆ ನಡೆಸಿದಾಗ ಕಾನೂನಿಗೆ ವಿರುದ್ಧವಾಗಿ ನಡೆಸುವಂತಹ ಬಾಡಿಗೆ ಎಂಬುದು ತಿಳಿದು ಬಂತು. ತಕ್ಷಣ ಪೊಲೀಸ್ ಮತ್ತು ಸಾರಿಗೆ ಇಲಾಖೆಗೆ ಮಾಹಿತಿ ನೀಡಿ ಕ್ರಮಕ್ಕೆ ಆಗ್ರಹಿಸಿದರು.
ಬಾಡಿಗೆ ಮಾಡುವಂತಹ ಖಾಸಗಿ ಕಾರುಗಳ ವಿರುದ್ಧ ಹೋರಾಟ ಮುಂದುವರಿಯಲಿದೆ. ಪ್ರತಿ ಬಾರಿಯೂ ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮನವಿ ನೀಡುತ್ತಲಿದ್ದೇವೆ. ಆದರೆ ಅಧಿಕಾರಿಗಳು ಅಥವಾ ಸಂಬಂಧಪಟ್ಟ ಇಲಾಖೆಗಳು ಈ ಬಗ್ಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಕಾರ್ಯಾಚರಣೆಯಲ್ಲಿ ಸಂಘದ ಗೌರವಾಧ್ಯಕ್ಷ ದಿನೇಶ್ ಕುಂಪಲ,ಉಪಾಧ್ಯಕ್ಷರಾದ ಹರೀಶ್ ಶೆಟ್ಟಿ ಕುತ್ತಾರು, ಹರಿಶ್ಚಂದ್ರ ಮತ್ತಿತರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.