ಮಂಗಳೂರು | ಕೆಎಫ್‌ಸಿ ಟ್ರೋಫಿ ಮುಡಿಗೇರಿಸಿಕೊಂಡ ಟೀಂ ಸರ್ಜನ್
ಕ್ರೀಡೆಗೆ ಧರ್ಮವಿಲ್ಲ, ಕ್ರೀಡಾಪಟುಗಳಿಗೆ ಕ್ರೀಡೆಯೇ ಧರ್ಮ : ಸಬ್ ಇನ್ ಸ್ಪೆಕ್ಟರ್ ಮಾರುತಿ ಪಿ.
ಮಂಗಳೂರು : ನಗರದ ಕಂದಕ್ ಪರಿಸರದ ಗಲ್ಲಿ ಕ್ರೀಡಾಂಗಣದಲ್ಲಿ ಕೆ.ಎಫ್.ಸಿ ಟ್ರೋಫಿ 2025 ರೋಚಕ ಹಣಾಹಣಿಯ ಫೈನಲ್ ನಲ್ಲಿ ಕೊನೆಯ ಎಸೆತ ಸಿಕ್ಸರ್ ಬಾರಿಸುವ ಮೂಲಕ ಸರ್ಜನ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು. ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಯಂಗ್ ಚಾಲೆಂಜರ್ಸ್ ತಂಡ ಫೈನಲ್ ಪಂದ್ಯದಲ್ಲಿ ಎಡವಿತು.
ಫೈನಲ್ ಪಂದ್ಯಾಕೂಟದ ಪಂದ್ಯಶ್ರೇಷ್ಠ ಪ್ರಶಸ್ತಿ ಆಲ್ ರೌಂಡರ್ ಪ್ರದರ್ಶನ ತೋರಿದ ರಿಲ್ವಾನ್, ಟೂರ್ನಿಯಲ್ಲಿ ಉತ್ತಮ ದಾಂಡಿಗನಾಗಿ ಜಾಫರ್ ಸಾಧಿಕ್, ಅತೀ ಹೆಚ್ಚು ವಿಕೆಟ್ ಕೆ.ಮುಖ್ತಾರ್ ಮತ್ತು ಟೂರ್ನಿಯ ಸರಣಿ ಶ್ರೇಷ್ಠ ಪ್ರಶಸ್ತಿ ರಿಲ್ವಾನ್ ಪಡೆದುಕೊಂಡರು.
ಕ್ರೀಡಾಕೂಟಕ್ಕೆ ಅತಿಥಿಯಾಗಿ ಆಗಮಿಸಿದ ಪಾಂಡೇಶ್ವರ ಠಾಣೆಯ ಸಬ್ ಇನ್ ಸ್ಪೆಕ್ಟರ್ ಮಾರುತಿ ಪಿ. ಮಾತನಾಡಿ ಕ್ರೀಡಾಪಾಡುಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಾನ್ಸ್ ಸ್ಟೇಬಲ್ ಸಾಗರ್, ಸ್ಥಳೀಯ ಜನ ಪ್ರತಿನಿಧಿ ಅಬ್ದುಲ್ ಲತೀಫ್ ಕಂದಕ್, ಅನಿವಾಸಿ ತೌಫೀಕ್, ಫಿರೋಜ್, ಬದ್ರಿಯಾ ಬೇಕರಿ ಮಾಲಕರಾದ ಮುಸ್ತಫಾ ಉಪಸ್ಥಿತರಿದ್ದರು.
ಪಂದ್ಯಾಕೂಟಕ್ಕೆ ಯಶಸ್ವಿಯಾಗಿ ಸಹಕರಿಸಿದ ರಾಜು, ಫಹೀಮ್, ಪ್ರದೀಪ್ ಯು.ಎಮ್. ಮುಕ್ತಾರ್ ಕೆ, ಅಬ್ದುಲ್ ಆಸೀಫ್, ರಾಕೀಬ್ ಸಹಕಾರ ನೀಡಿದರು. ಕಾರ್ಯಕ್ರಮದ ನಿರೂಪಣೆಯಾಗಿ ಶಾಝಿಲ್ ಕಂದಕ್ ವೀಕ್ಷಕ ವಿವರಣೆಗಾರನಾಗಿ ರಾಬೀನ್, ಅಂಪೈರ್ ಆಗಿ ಮುಸ್ತಫ ಬೋಲಾರ್ ಪಂದ್ಯಕೂಟ ಯಶಸ್ವಿಯಾಗಲು ನೆರವಾದರು.