ಫೈಹ ಅನ್ಸಾರೀಸ್ ಅಲುಮ್ನಿ ಯೂನಿಯನ್‌ನ ಕರ್ಮ ಪದ್ಧತಿಗೆ ಚಾಲನೆ
Update: 2023-09-11 23:48 IST
ಮಂಗಳೂರು: ಪಯ್ಯಕ್ಕಿ ಉಸ್ತಾದ್ ಇಸ್ಲಾಮಿಕ್ ಅಕಾಡಮಿಯ ಹಳೆ ವಿದ್ಯಾರ್ಥಿ ಸಂಘಟನೆ ‘ಫೈಹ ಅನ್ಸಾರೀಸ್ ಅಲುಮ್ನಿ ೨೦೨೩ -೨೫’ನೇ ಸಾಲಿನ ವತಿಯಿಂದ ಹಮ್ಮಿಕೊಂಡ ವಿಶಿಷ್ಟ ಯೋಜನೆ ಚಾಲನೆ ನೀಡಲಾಗಿದೆ.
ಅಲುಮ್ನಿ ಯೂನಿಯನ್ ಉದ್ಘಾಟನೆ ಹಾಗೂ ಆರು ತಿಂಗಳ ಕರ್ಮಪದ್ಧತಿಯ ಕರಪತ್ರದ ಬಿಡುಗಡೆ ಕಾರ್ಯವನ್ನು ಎನ್‌ಪಿಎಂ ಸಯ್ಯಿದ್ ಶರಫುದ್ದೀನ್ ತಂಳ್ ಕುನ್ನುಂಗೈ ನಿರ್ವಹಿಸಿದರು.
ಅಕಾಡಮಿ ಹಾಗೂ ಫೈಹ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ಮಜೀದ್ ದಾರಿಮಿ ಅಧ್ಯಕ್ಷತೆ ವಹಿಸಿದ್ದರು. ಫೈಹ ಪ್ರಥಮ ಸದಸ್ಯತ್ವ ಕಾರ್ಡ್‌ನ್ನು ಸಯ್ಯಿದ್ ಬಾಸಿತ್ ಅನ್ಸಾರಿಗೆ ವಿತರಿಸಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು.
ಫೈಹ ಕೋಶಾಧಿಕಾರಿ ಅದ್ನಾನ್ ಅನ್ಸಾರಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮುಸ್ತಫಾ ಅನ್ಸಾರಿ ವಿಷಯ ಮಂಡಿಸಿದರು. ಕಾರ್ಯಕ್ರಮದಲ್ಲಿ ಅಕಾಡಮಿಯ ಪದಾಧಿಕಾರಿಗಳಾದ ಹನೀಫ್ ಹಾಜಿ ಪೈವಳಿಕೆ, ಅಝೀಝ್ ಹಾಜಿ ಮರಿಕೆ, ಹಮೀದ್ ಹಾಜಿ ಪೈವಳಿಕೆ ಮತ್ತಿತರರು ಉಪಸ್ಥಿತರಿದ್ದರು.