×
Ad

ಮಂಗಳೂರು: ಮುಹಿಮ್ಮಾತ್ ಪ್ರಚಾರ ಉದ್ಘಾಟನೆ, ಹಿಮಮಿ ಸಂಗಮ

Update: 2025-12-24 18:57 IST

ಮಂಗಳೂರು, ಡಿ.24: ಮುಹಿಮ್ಮಾತುಲ್ ಮುಸ್ಲಿಮೀನ್ ಎಜುಕೇಶನ್ ಸೆಂಟರ್ ಕಾಸರಗೋಡು ಇದರ ಸಂಸ್ಥಾಪಕ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಳ್‌ರ 20ನೇ ಉರೂಸ್ ಹಾಗೂ 2026ರ ಜನವರಿ 28-31ರವರೆಗೆ ನಡೆಯಲಿ ರುವ ಮುಹಿಮ್ಮಾತ್ ಸನದು ದಾನ ಸಮ್ಮೇಳನದ ಪ್ರಚಾರ ಉದ್ಘಾಟನಾ ಸಮಾವೇಶ ಮತ್ತು ಹಿಮಮೀಸ್ ಸಂಗಮವು ಮಂಗಳವಾರ ನಗರದ ಪಂಪ್‌ವೆಲ್ ಸಮೀಪದ ಯುನಿಕ್ಸ್ ಬಿಲ್ಡಿಂಗ್‌ನಲ್ಲಿ ಜರುಗಿತು.

ಸಂಸ್ಥೆಯ ಉಪಾಧ್ಯಕ್ಷ ಸಯ್ಯಿದ್ ಹಸನುಲ್ ಅಹ್ದಲ್ ತಂಳ್ ನಾಯಕತ್ವ ವಹಿಸಿದರು. ಹಿಮಮೀಸ್ ಕರ್ನಾಟಕ ಅಧ್ಯಕ್ಷ. ಸಯ್ಯಿದ್ ಶರಫುದ್ದೀನ್ ತಂಳ್ ಪರೀದ್‌ನಗರ ದುಆದೊಂದಿಗೆ ಪ್ರಾರಂಭಗೊಂಡಿತು.

ಕೇರಳ ಮುಸ್ಲಿಂ ಜಮಾಅತ್ ಉಪಾಧ್ಯಕ್ಷ ಬಿಎಸ್ ಅಬ್ದುಲ್ಲ ಕುಂಞ ಫೈಝಿ ಉದ್ಘಾಟಿಸಿದರು. ಕಾರ್ಯದರ್ಶಿ ಮುನೀರ್ ತಂಳ್ ಅವರಯ ತ್ವಾಹಿರುಲ್ ಅಹ್ದಲ್ ತಂಳ್‌ರ ಜೀವನದ ಬಗ್ಗೆ ವಿವರಿಸಿದರು.

ಕೆಕೆಎಂ ಕಾಮಿಲ್ ಸಖಾಫಿ ಸ್ವಾಗತಿಸಿದರು. ಯೋಜನಾ ಸಮಿತಿ ಅಧ್ಯಕ್ಷ ಎಂಪಿಎಂ ಅಶ್ರಫ್ ಸಅದಿ ಮಲ್ಲೂರು ಪ್ರಾಸ್ತಾವಿಕವಾಗಿ ಮಾತಾಡಿದರು. ಹಿಮಮಿಗಳಿಗೆ ಮುಹೀಸುನ್ನ ಸಾರಥಿ ಕೆಎಂ ಮುಸ್ತಫಾ ನಯೀಮಿ ವಿಷಯ ಮಂಡಿಸಿದರು.

ವೇದಿಕೆಯಲ್ಲಿ ಮುಹಿಮ್ಮಾತ್ ಗುರುಗಳಾದ ಅಬ್ದುರ‌್ರಹ್ಮಾನ್ ಅಹ್ಸನಿ, ಎಸ್‌ವೈಎಸ್ ರಾಜ್ಯಾಧ್ಯಕ್ಷ ಬಶೀರ್ ಸಅದಿ ಪೀಣ್ಯ, ಮುಹಿಮ್ಮಾತ್‌ನಿಂದ ಅಬ್ದುಲ್ ಖಾದರ್ ಸಖಾಫಿ ಮೊಗ್ರಾಲ್, ಮೂಸ ಸಖಾಫಿ ಕಳತ್ತೂರು, ಅಬ್ದುಲ್ ಅಝೀಝ್ ಹಿಮಮಿ ಗೋಸಾಡ, ಅಬ್ದುಲ್ ಖಾದರ್ ಜಲಾಲಿ, ಸಯ್ಯಿದ್ ಅಝ್‌ಹರ್ ತಂಳ್, ಹಾಜಿ ಅಮೀರ್ ಆಲಿ ಚೂರಿ, ಕೋಶಾಧಿಕಾರಿ, ಮುಹಮ್ಮದ್ ಅಶ್ರಫ್ ಸಖಾಫಿ ಉಳುವಾರ್, ಎಸ್‌ವೈಎಸ್ ಪ್ರಧಾನ ಕಾರ್ಯದರ್ಶಿ ಕೆಎಂ ಸಿದ್ದೀಕ್ ಮೋಂಟುಗೋಳಿ, ಕರ್ನಾಟಕ ಯೋಜನಾ ಸಮಿತಿಯ ಕೋಶಾಧಿಕಾರಿ ಬದ್ರುದ್ದೀನ್ ಹಾಜಿ ಬಜಪೆ, ಉಪಾಧ್ಯಕ್ಷ ಇಸಾಕ್ ಹಾಜಿ ಬೊಳ್ಳಾಯಿ, ಮುಹಿಮ್ಮಾತ್ ಕರ್ನಾಟಕ ಯೋಜನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ ಮಂಗಳೂರು, ಸಲೀಂ ಕನ್ಯಾಡಿ, ಸಲಾಂ ಮದನಿ ಗಡುಕಲ್ಲು ಉಪಸ್ಥಿತರಿದ್ದರು. ಕೆ.ಕೆ. ಅಶ್ರಫ್ ಸಖಾಫಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News