×
Ad

ಗುರುಪುರ: ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆಯ ಪೂರ್ವಭಾವಿ ಸಭೆ

Update: 2025-12-24 19:39 IST

ಗುರುಪುರ: ಮುಂದಿನ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯ ಪೂರ್ವಭಾವಿ ಸಭೆಯು ಚುನಾವಣೆ ಸಂಬಂಧ ಗುರುಪುರ ಬ್ಲಾಕ್‌ ಕಾಂಗ್ರೆಸ್ ನ ಸಭೆಯು ಕೆಪಿಸಿಸಿ ಪ್ರಧಾ‌ನ ಕಾರ್ಯದರ್ಶಿ ಇನಾಯತ್ ಅಲಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಗುರುಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.

ಇನಾಯತ್ ಅಲಿ ಮಾತನಾಡಿ, ಬೂತ್ ಮಟ್ಟದಲ್ಲೂ ಸಭೆಗಳು ನಡೆಯಬೇಕು. ತಿಂಗಳಿಗೊಂದು ಸಭೆ‌ ‌ನಡೆಸಲಾ ಗುತ್ತಿದೆ. ವರಾಹ ಪೌಂಡೇಶನ್ ರೀತಿ ಎಲ್ಲಾ ವಲಯ ಮಟ್ಟದಲ್ಲಿ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸ ಬೇಕು. ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಬ್ಲಾಕ್ ನಿರ್ವಹಿಸಲಿದೆ.

ಕಾಂಗ್ರೆಸ್ ಕಾರ್ಯಕರ್ತರು ಗೆದ್ದ ಬಿಜೆಪಿ ಸದಸ್ಯರ ಫೊಟೊಗಳನ್ನು ಹಂಚಿ ಸಂಭ್ರಮಿಸುತ್ತಿದ್ದಾರೆ‌. ಕಾಂಗ್ರೆಸ್ ಎಂದರೆ ಸಾಯುವ ವರೆಗೂ ಸಾಯುವವರೆಗೂ ಕಾಂಗ್ರೆಸ್ ಆಗಿರಬೇಕು. ಮುಂದಿನ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡುವವರೆಗೆ ಕಾರ್ಯಕರ್ತರು, ನಾಯಕರು ವಿರಮಿಸಬಾರದು ಎಂದು ಇನಾಯತ್ ಅಲಿ ನುಡಿದರು.

ಬಳಿಕ ಮಾತನಾಡಿದ ಕಾಂಗ್ರೆಸ್ ದ.ಕ. ಜಿಲ್ಲಾ ಉಸ್ತುವಾರಿ ಗಿರೀಶ್ ಆಳ್ವ, ರಾಜ್ಯದಲ್ಲಿ ನೀಡಿರುವ ಗ್ಯಾರಂಟಿಗಳು ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಮತಗಳಾಗಿ‌ ಬದಲಾಗಿಲ್ಲ. ಮುಂದಿನ ಗ್ರಾಮ ಪಂಚಾಯತ್, ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆ ಮುಂದಿನ ವಿಧಾನ ಸಭೆ ಚುನಾವಣೆಯ ಕನ್ನಡಿ ಎಂದರು.

ಗುರುಪುರ ಕಾಂಗ್ರೆಸ್ ನ ಭದ್ರಕೋಟೆ, ಇಲ್ಲಿ ಕಾಂಗ್ರೆಸ್ ನ ಹಲವು ಬಲಿಷ್ಠ ನಾಯಕರು ಇದ್ದಾರೆ‌. ಹಾಗಾಗಿ ಮುಂದಿನ ಚುನಾವಣೆಯಲ್ಲಿ ಗುರುಪುರದಲ್ಲಿ ಅತೀ ಹೆಚ್ಚಿನ ಮತಗಳು ಪಕ್ಷಕ್ಕೆ ದೊರೆಯಲಿದೆ ಎಂದರು.

ಸಭೆಯಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ವಿವಿಧ ಸಲಹೆ ಸೂಚನೆಗಳನ್ನು ನೀಡಿದರು.

ಸಭೆಯಲ್ಲಿ ಬ್ಲಾಕ್ ಅಧ್ಯಕ್ಷ ಬಿ.ಎಲ್‌. ಪದ್ಮನಾಭ ಪೂಜಾರಿ, ಕೆಪಿಸಿಸಿ ಸದಸ್ಯ ಆರ್.ಕೆ. ಪ್ರಥ್ವಿರಾಜ್‌, ಜಿ.ಪಂ ಮಾಜಿ ಸದಸ್ಯ ಕೃಷ್ಣ ಅಮೀನ್, ಬ್ಲಾಕ್ ಮಹಿಳಾ ಘಟಕಾಧ್ಯಕ್ಷೆ ಜಯಲಕ್ಷ್ಮೀ , ಜಿಲ್ಲಾ ಹಿಂದುಳಿದ ವರ್ಗದ ಅಧ್ಯಕ್ಷ ಗಣೇಶ್ ಪೂಜಾರಿ, ಗುರುಪುರ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಬಾಷಾ ಗುರುಪುರ, ಯೂತ್ ಬ್ಲಾಕ್‌ ಅಧ್ಯಕ್ಷ ಮುಫೀದ್ ಮೊದಲಾದವರು ಇದ್ದರು.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News